Asianet Suvarna News Asianet Suvarna News

ಕಾಂತಾರ ಬಗ್ಗೆ ಕಿರಿಕ್ ಬೆಡಗಿ ಮೌನ: ಅವರು ತುಂಬಾ ಬ್ಯುಸಿ ಅಂದ್ರು ಪ್ರಮೋದ್ ಶೆಟ್ಟಿ!

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತಿದ್ದು, ಸಿನಿಮಾ ಬಗ್ಗೆ  ದೊಡ್ಡ-ದೊಡ್ಡ ಸ್ಟಾರ್ಸ್ ಮನ ತುಂಬಿ ಮಾತನಾಡಿದ್ದಾರೆ. ಆದರೆ ಕಿರಿಕ್ ಬೆಡಗಿ ರಶ್ಮಿಕಾ, ಕಾಂತಾರ ಬಗ್ಗೆ ಇದುವರೆಗೂ ಮಾತಾಡಿಲ್ಲ. ಈ ಬಗ್ಗೆ ನಟ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ. 

First Published Oct 21, 2022, 11:38 AM IST | Last Updated Oct 21, 2022, 11:38 AM IST

ಈ ವಿಚಾರವಾಗಿ ರಶ್ಮಿಕಾ ತುಂಬಾ ಟ್ರೋಲ್ ಆಗುತ್ತಿದ್ದು, ಇದೇ ವೇಳೆ ಪ್ರಮೋದ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಪಾಪ ರಶ್ಮಿಕಾ ಬ್ಯುಸಿಯಿದ್ದಾರೆ ಅನಿಸುತ್ತೆ, ಬಿಡುವಾದಾಗ ಕಾಂತಾರ ಸಿನಿಮಾ ನೋಡುತ್ತಾರೆ. ಅವರದ್ದೇ ಸಿನಿಮಾ ಗುಡ್ ಬೈ ಕೆಲ ದಿನಗಳ ಹಿಂದಷ್ಟೆ ಬಿಡುಗಡೆಯಾಗಿದೆ. ಆ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರಬಹುದು. ಫ್ರೀ ಆದಾಗ ನೋಡಿ ಕಾಮೆಂಟ್ ಮಾಡುತ್ತಾರೆ. ಅವರು ಕಾಮೆಂಟ್ ಮಾಡಿಲ್ಲ ಅಂತಾ ನೀವೆಲ್ಲರೂ ಸಿನಿಮಾ ನೋಡದೇ ಇರಬೇಡಿ ಎಂದು ಹೇಳಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Video Top Stories