ಥೇಟ್​ ಸಿನಿಮಾ ಸ್ಟೈಲ್​​​​ನಲ್ಲೇ ಅವಾಜ್ ಬಿಟ್ಟ ಪವನ್ ಕಲ್ಯಾಣ್: ಅಬ್ರಾಡ್​​ನಿಂದ ವೀಡಿಯೋ ಬಿಟ್ಟ ಪ್ರಕಾಶ್ ರಾಜ್!

ಸನಾತನ ಧರ್ಮದ ಬಗ್ಗೆ ಅವಹೇಳನ ಮಾಡುವವರಿಗೆ ಖಡಕ್ ಎಚ್ಚಿರಿಕೆ ಕೊಟ್ಟಿರೋ ಪವನ್, ಪ್ರಕಾಶ್ ರೈಗೂ ಆವಾಜ್ ಹಾಕಿದ್ದಾರೆ. ಪವರ್ ಸ್ಟಾರ್ ಗುಡುಗಿಗೆ ರೈ ಥಂಡಾ ಹೊಡೆದಿದ್ದಾರೆ. ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶ ಇತ್ತು ಅನ್ನೋ ವಿಚಾರ ಬಹಿರಂಗವಾದ ಮೇಲೆ ಆಂಧ್ರ ಪಾಲಿಟಿಕ್ಸ್ ರಣರಂಗವಾಗಿದೆ.

First Published Sep 27, 2024, 4:35 PM IST | Last Updated Sep 27, 2024, 4:36 PM IST

ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿಧರೆಲ್ಲಾ ಒಂದೇ ಕುಟುಂಬ ಅಂತ ಹೇಳುತ್ತಿರುತ್ತಾರೆ. ಆದ್ರೆ ಈ ಕುಟುಂಬದಲ್ಲಿ ಜಗಳನೇ ಆಗಲ್ವಾ ಅಂತ ಕೇಳಿದ್ರೆ, ಛೇ.. ಛೇ.. ಹಂಗ್​ ಆಗದೇ ಇರುತ್ತಾ.? ಜಳಗ ಮಾಡಿಕೊಳ್ಳದೆ ಇದ್ರೆ ಜನ ಏನಂತಾರೆ ಅಲ್ವಾ..? ಇಲ್ಲೂ ಜಗಳು ಇದ್ದಿದ್ದೇ. ಇದೀಗ ಟಾಲಿವುಡ್​ ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗು ಬಹುಭಾಷಾ ನಟ ಪ್ರಕಾಶ್ ರಾಜ್ ಮಧ್ಯೆ ಭಾರಿ ಟಾಕ್ ವಾರ್ ಆಗುತ್ತಿದೆ. ಅದಕ್ಕೆ ಕಾರಣ ತಿರುಪತಿ ಲಡ್ಡು.. ಹಾಗಾದ್ರೆ ಪ್ರಕಾಶ್​-ಪವನ್ ಮಧ್ಯೆ ಲಡ್ಡು ಲಡಾಯಿ ಹೇಗಿದೆ ಅಂತ ನೋಡೋಣ ಬನ್ನಿ. ತಿರುಪತಿ ಲಡ್ಡು ವಿವಾದ ಬಳಿಕ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ ಮಾಡಿಕೊಳ್ತಿನಿ ಅಂತ 11 ದಿನಗಳ ಉಪವಾಸ ಮಾಡ್ತಾ ಇದ್ದಾರೆ. ಸ್ವತಃ ದೇಗುಲದ ಮೆಟ್ಟಿಲುಗಳನ್ನ ತೊಳೆದ ಪವನ್ ಆಸ್ತಿಕರೆಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 

ಈ ನಡುವೆ ಸನಾತನ ಧರ್ಮದ ಬಗ್ಗೆ ಅವಹೇಳನ ಮಾಡುವವರಿಗೆ ಖಡಕ್ ಎಚ್ಚಿರಿಕೆ ಕೊಟ್ಟಿರೋ ಪವನ್, ಪ್ರಕಾಶ್ ರೈಗೂ ಆವಾಜ್ ಹಾಕಿದ್ದಾರೆ. ಪವರ್ ಸ್ಟಾರ್ ಗುಡುಗಿಗೆ ರೈ ಥಂಡಾ ಹೊಡೆದಿದ್ದಾರೆ. ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶ ಇತ್ತು ಅನ್ನೋ ವಿಚಾರ ಬಹಿರಂಗವಾದ ಮೇಲೆ ಆಂಧ್ರ ಪಾಲಿಟಿಕ್ಸ್ ರಣರಂಗವಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ , ಈ ವಿಚಾರದಲ್ಲಿ ತಪ್ಪಿತ್ತಸ್ತರಿಗೆ ಶಿಕ್ಷೆ ಕೊಡಿಸ್ತಿನಿ ಅಂತ ಪಣ ತೊಟ್ಟಿದ್ದಾರೆ. ಈ ವಿಚಾರವನ್ನ ತುಂಬಾನೇ ಗಂಭೀರವಾಗಿ ತೆಗೆದುಕೊಂಡಿರೋ ಪವನ್ ಕಲ್ಯಾಣ್, ಸಿನಿಮಾ ಮಂದಿಗೂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಪವನ್​ ಹಾಗು ನಟ ಪ್ರಕಾಶ್ ರಾಜ್ ಮಧ್ಯೆ ತಿರುಪತಿ ಲಡ್ಡು ಲಡಾಡಿ ಜೋರಾಗಿದೆ. 

ತಿರುಪತಿ ವಿಚಾರವಾಗಿ ಪವನ್ ಕಲ್ಯಾಣ್ ವಿರುದ್ದ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ನೀವು ಡಿಸಿಎಂ ಆಗಿದ್ದೀರಿ, ಈ ಬಗ್ಗೆ ತನಿಖೆ ಮಾಡಿಸಿ ಅದರ ಬದಲು ಕೋಮುಸೌಹಾರ್ದ ಕದಡುವಂತೆ ಮಾತನಾಡಬೇಡಿ ಅಂತ ಪವನ್ ಗೆ ಬುದ್ದಿ ಹೇಳಿದ್ರು. ಆದ್ರೆ ಅದಕ್ಕೆ ತಿರುಮಲದಲ್ಲೇ ಪವನ್ ಖಡಕ್ ಕೌಂಟರ್ ಕೊಟ್ಟಿದ್ದಾರೆ. ಪ್ರಕಾಶ್ ರಾಜ್​​ಗೆ ಕ್ಲಾಸ್ ತೆಗೆದುಕೊಂಡಿರೋ ಪವನ್ ಕಲ್ಯಾಣ್, ನಿಮ್ಮ ಮೇಲೆ ನನಗೆ ಗೌರವ ಇದೆ. ಆದ್ರೆ ಎಲ್ಲಾ ವಿಚಾರದಲ್ಲೂ ಮಾತನಾಡೋದಕ್ಕೆ ಬರಬೇಡಿ. ಇದು ನಮ್ಮ ಧರ್ಮದ ಸೂಕ್ಮ್ಷ ವಿಚಾರ ನಿಮ್ಮ ಸಲಹೆ ಬೇಕಿಲ್ಲ. ಜಾತ್ಯಾತೀತತೆ ಅನ್ನೋದು ಒನ್ ಸೈಡೆಡ್ ಆಗಬಾರದು. ಅನ್ಯಧರ್ಮಿಯರು ಕೂಡ ಹಿಂದೂಗಳ ನಂಬಿಕೆಯನ್ನ ಗೌರವಿಸಬೇಕು ಸನಾತನದ ಧರ್ಮದ ತಂಟೆಗೆ ಬಂದ್ರೆ ನಾನು ಸುಮ್ಮನಿರಲ್ಲ ಅಂತ ಗುಡುಗಿದ್ದಾರೆ. ಥೇಟ್ ಸಿನಿಮಾಗಳಲ್ಲಿ ಹೀರೋ ವಿಲನ್ ಗೆ ಆವಾಜ್ ಹಾಕಿದಂತೆಯೇ ಪ್ರಕಾಶ್ ರೈಗೆ ಪವನ್ ಕಲ್ಯಾಣ್ ಆವಾಜ್ ಹಾಕಿದ್ದಾರೆ. 

ಪವನ್ ಮಾತು ರಾಜ್​ ನಡುಕ ತಂದಿರೋದು ಸುಳ್ಳಲ್ಲ. ಪವನ್ ಕಲ್ಯಾಣ್​​ನ ಕೆಣಕಿದ್ರೆ ಆಂಧ್ರದಲ್ಲಿ ಬಾಳೋದು ಕಷ್ಟ ಅಂತ ಗೊತ್ತಿರೋ ನಾನು ಈಗ ಅಬ್ರಾಡ್​​ನಲ್ಲಿದ್ದೇನೆ ಬಂದು ಮಾತನಾಡುತ್ತೇನೆ ಅಂತ ಸೈಲೆಂಟ್ ಆಗಿದ್ದಾರೆ. ಇನ್ನೂ ಇತ್ತೀಚಿಗೆ ಹೈದ್ರಾಬಾದ್ ಗೆ ತಮ್ಮ ಸಿನಿಮಾ ಪ್ರಚಾರಕ್ಕೆ ಬಂದಿದ್ದ ಕಾಲಿವುಡ್ ನಟ ಕಾರ್ತಿ , ವೇದಿಕೆ ಮೇಲೆ ತಿರುಪತಿ ಲಡ್ಡು ಬಗ್ಗೆ ತಮಾಷೆ ಮಾಡಿದ್ರು. ಅದು ಕೂಡ ಪವನ್ ಕಲ್ಯಾಣ್ ಗಮನಕ್ಕೆ ಬಂದಿದೆ. ಸಿನಿಮಾ ಮಂದಿ ಈ ವಿಚಾರದಲ್ಲಿ ಮಾತನಾಡೋದಾದ್ರೆ ಗಂಭೀರವಾಗಿ ಮಾತನಾಡಿ, ಈ ವಿಚಾರದಲ್ಲಿ ತಮಾಷೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಅಂತ ಕಾರ್ತಿಗೆ ಟಾಂಗ್ ಕೊಟ್ಟಿದ್ದಾರೆ ಪವನ್. ಒಟ್ಟಾರೆ ಡಿಸಿಎಂ ಆದ ಮೇಲೆ ಪಕ್ಕಾ ಪವರ್ ಪಾಲಿಟಿಕ್ಸ್ ಮಾಡ್ತಿರೋ ಪವನ್, ಬಿರುಗಾಳಿ ಎಬ್ಬಿಸಿದ್ದಾರೆ. ತಿರುಪತಿ ಲಡ್ಡು ವಿವಾದದ ವಿಚಾರದಲ್ಲಂತೂ ಪವನ್ ಕಲ್ಯಾಣ್ ನಿಗಿ ನಿಗಿ ಕೆಂಡವಾಗಿದ್ದಾರೆ.