
Pathaan: ಒಳ್ಳೆಯ ಮನಸ್ಸಿನಿಂದ ಪಠಾಣ್ ಸಿನಿಮಾ ನೋಡಿ: ಶಾರುಖ್ ಖಾನ್ ಮನವಿ
ಒಳ್ಳೆಯ ಮನಸ್ಸಿನಿಂದ ಪಠಾಣ್ ಚಿತ್ರದ ಹಾಡು ನೋಡಿದ್ದೀರಿ. ಹಾಗೆಯೇ ಸಿನಿಮಾವನ್ನೂ ವೀಕ್ಷಿಸಿ ಎಂದು ನಟ ಶಾರುಖ್ ಖಾನ್ ತಿಳಿಸಿದ್ದಾರೆ.
ಪಠಾಣ್ ಸಿನಿಮಾದ ಮತ್ತೊಂದು ಹಾಡು ನಿನ್ನೆ ಬಿಡುಗಡೆ ಆಗಿದ್ದು, ಈ ಹಾಡಿನ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಈ ಹೊತ್ತಿನಲ್ಲಿ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದು, ಒಳ್ಳೆಯ ಮನಸ್ಸಿನಿಂದ ಹಾಡು ನೋಡಿದ್ದೀರಿ. ಹೀಗೆ ಸಿನಿಮಾವನ್ನೂ ವೀಕ್ಷಿಸಿ ಎಂದು ಹೇಳಿದ್ದಾರೆ. ಇತ್ತೀಚೆಗೆ ಪಠಾಣ್ ಸಿನಿಮಾದ ಭೇಷರಂ ರಂಗ್ ಹಾಡು ವಿವಾದಕ್ಕೆ ಕಾರಣ ಆಗಿತ್ತು. ಆ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇನ್ನು ಪಠಾಣ್ ಸಿನಿಮಾ ಜನವರಿ 25ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ.