Asianet Suvarna News Asianet Suvarna News

ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಪಠಾಣ್': ಐದೇ ದಿನದಲ್ಲಿ 500 ಕೋಟಿ ಕಲೆಕ್ಷನ್

ಪಠಾಣ್ ಸಿನಿಮಾ ಬಿಡುಗಡೆಯಾಗಿ ಐದೇ ದಿನದಲ್ಲಿ 500 ಕೋಟಿ ಗಳಿಸಿದ್ದು, ಈ ವರ್ಷದ ರೆಕಾರ್ಡ್ ಬುಕ್‌ನಲ್ಲಿ ಟಾಪ್'ಗೆ ಬಂದಿದೆ.
 

ಪಠಾಣ್ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಟ್ಟು ವರ್ಲ್ಡ್ ವೈಡ್ ಕಲೆಕ್ಷನ್ 542 ಕೋಟಿ ಆಗಿದೆ. ಭಾರತದಲ್ಲಿ 335 ಕೋಟಿ ಗಳಿಸಿದ್ರೆ, ಹೊರ ದೇಶಗಳಲ್ಲಿ 207 ಕೋಟಿ ಬಾಚಿಕೊಂಡಿದೆ. ಪಠಾಣ್ ಸಿನಿಮಾ ಬಿಗ್ ಸಕ್ಸಸ್'ಗೆ ಶಾರುಖ್ ಖಾನ್ ಫುಲ್ ಖುಷ್ ಆಗಿದ್ದು, ಮುಂಬೈನ ಮನ್ನತ್'ನಲ್ಲಿರೋ ಮನೆಯಲ್ಲಿ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ ಕಿಂಗ್ ಖಾನ್.ಶಾರುಖ್ ಮನೆ ಎದುರು ಸಾವಿರಾರು ಅಭಿಮಾನಿಗಳು ಸೇರಿದ್ರು. ಅಭಿಮಾನಿಗಳನ್ನು ನೋಡಿ ಶಾರುಖ್ ಕೈ ಬೀಸಿದ್ರು. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.