Asianet Suvarna News Asianet Suvarna News

ವಿಜಯ್-ಸಂಗೀತಾ ದಾಂಪತ್ಯದಲ್ಲಿ ಬಿರುಕು: ಡಿವೋರ್ಸ್‌ಗೆ 'ಮಹಾನಟಿ' ಕಾರಣ?

ತಮಿಳು ನಟ ದಳಪತಿ ವಿಜಯ್‌ ಪತ್ನಿಗೆ ಡಿವೋರ್ಸ್‌ ಕೊಡುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಸದ್ದು ಮಾಡುತ್ತಿದೆ.‌ ಈ ವಿಚಾರದಲ್ಲಿ ರಶ್ಮಿಕಾ ನಂತರ ಕೀರ್ತಿ ಸುರೇಶ್ ಹೆಸರು ಕೇಳಿ ಬರುತ್ತಿದೆ.

ದಳಪತಿ ವಿಜಯ್‌ ದಂಪತಿ ಡಿವೋರ್ಸ್ ವಿಚಾರಕ್ಕೆ ನಟಿ ರಶ್ಮಿಕಾ ಮಂದಣ್ಣ ಕಾರಣ ಎಂದು ಕೆಲವು ಕಿಡಿಗೇಡಿಗಳು ಸುದ್ದಿ ಮಾಡಿ ಬಿಟ್ಟಿದ್ದರು. ಇದೀಗ ವಿಜಯ್‌ ತಮ್ಮ ಪತ್ನಿ ಸಂಗೀತಾ ಅವರಿಗೆ ಡಿವೋರ್ಸ್‌ ಕೊಡಲು ನಟಿ ಕೀರ್ತಿ ಸುರೇಶ್‌ ಕಾರಣ ಎಂದು ಗುಲ್ಲೆದ್ದಿದೆ. ವಿಜಯ್‌ ಹಾಗೂ ಪತ್ನಿ ಸಂಗಿತಾ ನಡುವೇ ಬಂದಿರುವುದು ಒಂದು ದೊಡ್ಡ ಸ್ಟಾರ್‌ ನಟಿ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಇದು ಎಷ್ಟು ನಿಜವೋ ಏನೋ ಗೊತ್ತಿಲ್ಲ. ಇನ್ನು ಕೀರ್ತಿ ಸುರೇಶ್‌ ಮದುವೆ ಆಗುತ್ತಿರುವುದು ನಿಜ ಅಂತೆ. ಆದ್ರೆ ಯಾರನ್ನು ಏನೂ ಎನ್ನುವುದನ್ನು ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ. ಇನ್ನು ತಮಿಳು ಆಕ್ಟರ್‌ ವಿಜಯ್‌ ಮಾತ್ರ ಅವರ ಡಿವೋರ್ಸ್‌ ಬಗ್ಗೆ ಮಾತನಾಡಿಲ್ಲ.