
ಧನುಷ್ ವಿರುದ್ಧ ನಯನತಾರಾಗೆ ಹಿನ್ನಡೆ; 'ಲೇಡಿ ಸೂಪರ್ ಸ್ಟಾರ್' ಕಥೆ ಮುಂದೇನು?
ಈ ಡಾಕ್ಯುಮೆಂಟರಿ ಪ್ರಸಾರ ಮಾಡಿದ್ದ 'ನೆಟ್ಫ್ಲಿಕ್ಸ್ ಇಂಡಿಯಾ' ಈ ಅರ್ಜಿಯನ್ನ ರದ್ದು ಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈ ಅರ್ಜಿಯನ್ನ ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ. ನಯನತಾರಾ..
ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ತಮ್ಮ ವಿವಾಹದ ಡಾಕ್ಯುಮೆಂಟರಿಗೆ ಧನುಷ್ (Dhanush) ನಿರ್ಮಾಣದ 'ನಾನುಂ ರೌಡಿ ದಾನ್' ಚಿತ್ರದ ದೃಶ್ಯವನ್ನ ಒಪ್ಪಿಗೆ ಇಲ್ಲದೆ ಬಳಕೆ ಮಾಡಿಕೊಂಡಿದ್ದರು. ಈ ಸಂಬಂಧ ಧನುಷ್ ಕೋರ್ಟ್ನಲ್ಲಿ ಕಾಪಿರೈಟ್ ಕೇಸ್ ದಾಖಲಿಸಿದ್ದರು. ಈ ಡಾಕ್ಯುಮೆಂಟರಿ ಪ್ರಸಾರ ಮಾಡಿದ್ದ 'ನೆಟ್ಫ್ಲಿಕ್ಸ್ ಇಂಡಿಯಾ' ಈ ಅರ್ಜಿಯನ್ನ ರದ್ದು ಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು.
ಆದರೆ, ಈ ಅರ್ಜಿಯನ್ನ ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ. ನಯನತಾರಾ ವಿರುದ್ದ ಧನುಷ್ಗೆ ಆರಂಭಿಕ ಜಯ ಸಿಕ್ಕಿದೆ. ನಯನತಾರಾ v/s ಧನುಷ್ ವಾರ್ ಮತ್ತೊಂದು ಲೆವೆಲ್ ತಲುಪಿದೆ. ಇದೀಗ, ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಮುಂದಿನ ಹೆಜ್ಜೆ ಏನಿರಬಹುದು ಎಂದು ಹಲವರು ಕುತೂಹಲದಿಂದ ಕಾಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..