ಮೊದಲ ಬಾರಿ ನಿರ್ದೇಶನಕ್ಕಿಳಿದಿರೋ ಮೋಹನ್ ಲಾಲ್, ಎಲ್ಲೆಲ್ಲೂ ಫ್ಯಾಂಟಸಿ ಮೂವಿ ಬರೋಜ್ ಟ್ರೈಲರ್ ಸದ್ದು!

ಮೋಹನ್ ಲಾಲ್ ತಮ್ಮ 40 ವರ್ಷಗಳ ವೃತ್ತಿಜೀವನದಲ್ಲಿ 360ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಿರ್ಮಾಪಕರಾಗಿಯೂ ಯಶಸ್ಸು ಗಳಿಸಿದ್ದಾರೆ. ಬರೋಜ್ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಪ್ರಕಾಶ್ ರೈ ಮತ್ತು ಡಾರ್ಲಿಂಗ್ ಕೃಷ್ಣ ನಟಿಸಿರುವ ಫಾದರ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

First Published Dec 16, 2024, 11:33 AM IST | Last Updated Dec 16, 2024, 11:33 AM IST

ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಒಬ್ಬರಾದ ಮೋಹನ್ ಲಾಲ್ ತಮ್ಮ 40 ವರ್ಷದ ವೃತ್ತಿ ಜೀವನದಲ್ಲಿ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕರಾಗಿಯೂ ಯಶಸ್ಸು ಗಳಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದು ಬರೋಜ್ ಅನ್ನೋ ಫ್ಯಾಂಟಸಿ ಸಿನಿಮಾ ರೆಡಿ ಮಾಡಿದ್ದಾರೆ. ಸದ್ಯ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಿದೆ. 3ಡಿಯಲ್ಲಿ ಬರಲಿರೋ ಈ ಫ್ಯಾಂಟಸಿ ಕಹಾನಿ ಗೆಲ್ಲುತ್ತಾ..? ಮೋಹನ್ ಲಾಲ್​ಗೆ ನಿರ್ದೇಶಕನಾಗಿಯೂ ಸಕ್ಸಸ್ ಸಿಗುತ್ತಾ ಅನ್ನೋ ಕುತೂಹಲ ಸೃಷ್ಟಿಯಾಗಿದೆ.

ಆರ್ ಚಂದ್ರು ಅವರ ಆರ್.ಸಿ ಸ್ಟುಡಿಯೋಸ್ ನ ಮೊದಲ ಚಿತ್ರವಾಗಿ " ಫಾದರ್" ನಿರ್ಮಾಣವಾಗ್ತಾ ಇದೆ. ಇತ್ತೀಚಿಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ "ಫಾದರ್"   ಮೋಷನ್ ಪೋಸ್ಟರ್ ಅನಾವರಣ ಮಾಡಿ ಶುಭಹಾರೈಸಿದ್ದಾರೆ. ಅಪ್ಪ ಮಗನ ಬಾಂಧವ್ಯದ ಕಥೆ ಇರೋ ಈ ಸಿನಿಮಾದಲ್ಲಿ ಪ್ರಕಾಶ್ ರೈ ಮತ್ತು ಡಾರ್ಲಿಂಗ್ ಕೃಷ್ಣ ತಂದೆ ಮಗನ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. 

ಜಾಹೀರಾತು ಸಂಸ್ಥೆ ಮೂಲಕ ಸ್ಯಾಂಡಲ್​ವುಡ್​ ಜೊತೆ ನಂಟು ಹೊಂದಿರುವ ಪ್ರದೀಪ್ ದೊಡ್ಡಯ್ಯ  ‘ಔಟ್​ ಆಫ್​ ಸಿಲಬಸ್’ ಅನ್ನೋ ಚಿತ್ರವನ್ನ  ನಿರ್ದೇಶನ ಮಾಡಿದ್ದು, ಲೀಡ್ ರೋಲ್​ನಲ್ಲಿ ನಟನೆ ಕೂಡ ಮಾಡಿದ್ದಾರೆ. ವಿಜಯಕಲಾ ಸುಧಾಕರ್ ಮತ್ತು ತನುಷ್ ಎಸ್.ವಿ. ದೇಸಾಯಿ ಗೌಡ ಜಂಟಿಯಾಗಿ ‘ಔಟ್​ ಫಸ್​ ಸಿಲಬಸ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಗಿದ್ದು  ಯುವ ಜನರ ಮೆಚ್ಚುಗೆ ಗಳಿಸ್ತಾ ಇದೆ.