ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ಸ್​ಗೆ ಭರ್ಜರಿ ದಸರಾ ಗಿಫ್ಟ್: ಸೂಪರ್ ಹೀರೋ ಅವತಾರದಲ್ಲಿ ಎಂಟ್ರಿ

ಮೆಗಾಸ್ಟಾರ್ ಚಿರಂಜೀವಿ,  ಅಭಿಮಾನಿಗಳಿಗೆ ಭರ್ಜರಿ ದಸರಾ ಗಿಫ್ಟ್ ಕೊಟ್ಟಿದ್ದಾರೆ. ಚಿರು ನಟನೆಯ ಬಿಗ್ ಬಜೆಟ್ ಫ್ಯಾಂಟಸಿ ಸಿನಿಮಾ ವಿಶ್ವಂಭರ ಟೀಸರ್ ರಿಲೀಸ್ ಆಗಿದೆ. ಟೀಸರ್ ನೋಡಿದವರು ಹಾಲಿವುಡ್ ಮೂವಿ ಅವತಾರ್ ಜೊತೆ ಹೋಲಿಕೆ ಮಾಡ್ತಾ ಇದ್ದಾರೆ.

First Published Oct 13, 2024, 11:39 AM IST | Last Updated Oct 13, 2024, 11:39 AM IST

ಮೆಗಾಸ್ಟಾರ್ ಚಿರಂಜೀವಿ,  ಅಭಿಮಾನಿಗಳಿಗೆ ಭರ್ಜರಿ ದಸರಾ ಗಿಫ್ಟ್ ಕೊಟ್ಟಿದ್ದಾರೆ. ಚಿರು ನಟನೆಯ ಬಿಗ್ ಬಜೆಟ್ ಫ್ಯಾಂಟಸಿ ಸಿನಿಮಾ ವಿಶ್ವಂಭರ ಟೀಸರ್ ರಿಲೀಸ್ ಆಗಿದೆ. ಟೀಸರ್ ನೋಡಿದವರು ಹಾಲಿವುಡ್ ಮೂವಿ ಅವತಾರ್ ಜೊತೆ ಹೋಲಿಕೆ ಮಾಡ್ತಾ ಇದ್ದಾರೆ. ಟಾಲಿವುಡ್ ಮೆಗಾಮೂವಿ ವಿಶ್ವಂಭರ ಟೀಸರ್ ರಿಲೀಸ್ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ನಟನೆಯ ಈ ಸಿನಿಮಾ ಫ್ಯಾಂಟಸಿ ಕಹಾನಿಯನ್ನ ಹೊಂದಿದೆ. 1 ನಿಮಿಷ 32 ಸೆಕೆಂಡ್‌ನ ವಿಶ್ವಂಭರ ಟೀಸರ್ ಫ್ಯಾನ್ಸ್ ಗೆ ಅಕ್ಷರಶಃ ರೋಮಾಂಚನ ತಂದಿದೆ. 

ಹಾಲಿವುಡ್ ಮೂವಿ ಅವತಾರ್ ತರಹ ಇದೆ ಅಂತ ಫ್ಯಾನ್ಸ್ ಕಾಮೆಂಟ್ ಮಾಡ್ತಾ ಇದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಇದೇ ಮೊದಲ ಬಾರಿಗೆ ಸೂಪರ್ ಹೀರೋ ಅವತಾರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ. ಬಿಂಬಿಸಾರ ಖ್ಯಾತಿಯ  ವಸಿಷ್ಟ ಈ ಸಿನಿಮಾ ಌಕ್ಷನ್ ಕಟ್ ಹೇಳಿದ್ದು ಪುರಾಣಕಥೆಯ ಜೊತೆಗೆ ಒಂದಿಷ್ಟು ಫ್ಯಾಂಟಸಿ ಎಲೆಮೆಂಟ್ಸ್ ಬಳಸಿ ಸಿನಿಮಾ ಕಥೆ ಹೆಣೆದಿದ್ದಾರೆ. ಸದ್ಯ ಟೀಸರ್​ನಲ್ಲಿ ದೃಶ್ಯಗಳು ಸಿನಿಮಾ ಹೇಗಿರುತ್ತೆ ಅನ್ನೋದ್ರ ಸೂಚನೆ ನೀಡಿವೆ. ಟೀಸರ್​ನಲ್ಲಿರೋ ವಿಎಫ್ಎಕ್ಸ್, ಌಕ್ಷನ್ ದೃಶ್ಯಗಳು ಮೋಡಿ ಮಾಡ್ತಾ ಇವೆ. ಟೀಸರ್‌ ತುಂಬಾನೇ ಕ್ರಿಯೇಟಿವ್‌ ಆಗಿದ್ದು, ಚಿರಂಜೀವಿ ಎಂಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 

ರಾಕ್ಷಸರೊಂದಿಗಿನ ಚಿರಂಜೀವಿಯ ಫೈಟ್ ಸೀಕ್ವೆನ್ಸ್ ಅದ್ಭುತವಾಗಿದೆ. ಬಳಿಕ ಹನುಮಾನ್ ವಿಗ್ರಹದ ಬಳಿ ಬಂದು ನಿಲ್ಲುವ ಚಿರಂಜೀವಿ  ಲುಕ್‌ಗೆ ಮನಸೋತಿದ್ದಾರೆ ಫ್ಯಾನ್ಸ್‌. ವಿಶ್ವಂಭರ ಚಿತ್ರದಲ್ಲಿ ತ್ರಿಶಾ ಕೃಷ್ಣನ್, ಆಶಿಕಾ ರಂಗನಾಥ್ ಮತ್ತು ಕುನಾಲ್ ಕಪೂರ್ ನಾಯಕಿಯರು. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡ್ತಾ ಇದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಂಶಿ ಕೃಷ್ಣಾ ರೆಡ್ಡಿ ಮತ್ತು ಪ್ರಮೋದ್ ಉಪ್ಪಲಪಾಟಿ ವಿಶ್ವಂಭರ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ ಬರೊಬ್ಬರಿ 100 ಕೋಟಿ ಬಜೆಟ್​​ನಲ್ಲಿ ಸಿದ್ದವಾಗ್ತಿರೋ ಈ ಮೆಗಾಸಿನಿಮಾ 2025ರ ಸಂಕ್ರಾತಿಗೆ ತೆರೆಗೆ ಬರಲಿದೆ.