ಯುವಕರ ಮೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್; ಸಿನಿಮಾದವ್ರಿಗೂ ಸಖತ್ ಫೇವರಿಟ್

ಸ್ವಾತಂತ್ರ್ಯ ಹೋರಾಟ ಅಂತ ಬಂದಾಗ ಸಾಕಷ್ಟು ಹೋರಾಟಗಾರರು ನೆನಪಿಗೆ ಬರ್ತಾರೆ. ಒಬ್ಬೊಬ್ಬರು ಅವರದ್ದೇ ಆದ ರೀತಿಯಲ್ಲಿ ಹೋರಾಟ ಮಾಡಿ ಸ್ವಾತಂತ್ರ್ಯ ತರಲು ಕಷ್ಟ ಪಟ್ಟಿದ್ದಾರೆ. ಆದ್ರೆ ಸಿನಿಮಾ ಅಂತ ಬಂದಾಗ ಪ್ರತಿಯೊಬ್ಬರಿಗೂ ಸ್ಫೂರ್ತಿ ತುಂಬುವ ಹಾಗೂ ತೆರೆ ಮೇಲೆ ನೋಡಬೇಕು ಎನಿಸೋದು ಭಗತ್ ಸಿಂಗ್ ಅವರ ಹೋರಾಟದ ಕಥೆ. 

Share this Video
  • FB
  • Linkdin
  • Whatsapp

ಸ್ವಾತಂತ್ರ್ಯ ಹೋರಾಟ ಅಂತ ಬಂದಾಗ ಸಾಕಷ್ಟು ಹೋರಾಟಗಾರರು ನೆನಪಿಗೆ ಬರ್ತಾರೆ. ಒಬ್ಬೊಬ್ಬರು ಅವರದ್ದೇ ಆದ ರೀತಿಯಲ್ಲಿ ಹೋರಾಟ ಮಾಡಿ ಸ್ವಾತಂತ್ರ್ಯ ತರಲು ಕಷ್ಟ ಪಟ್ಟಿದ್ದಾರೆ. ಆದ್ರೆ ಸಿನಿಮಾ ಅಂತ ಬಂದಾಗ ಪ್ರತಿಯೊಬ್ಬರಿಗೂ ಸ್ಫೂರ್ತಿ ತುಂಬುವ ಹಾಗೂ ತೆರೆ ಮೇಲೆ ನೋಡಬೇಕು ಎನಿಸೋದು ಭಗತ್ ಸಿಂಗ್ ಅವರ ಹೋರಾಟದ ಕಥೆ. ಭಗತ್ ಸಿಂಗ್ ಅವ್ರಿಗೆ ಸಂಬಂಧಿಸಿದಂತೆ ಬಾಲಿವುಡ್ ಅಂಗಳದಲ್ಲಿ ಇಲ್ಲಿಯವರೆಗೂ 9 ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಆರು ಚಿತ್ರಗಳು ಸಂಪೂರ್ಣವಾಗಿ ಭಗತ್ ಸಿಂಗ್ ಅವ್ರ ಜೀವನಾಧಾರಿತ ಸಿನಿಮಾಗಳು. ಬಾಲಿವುಡ್ ನಲ್ಲಿ ಸ್ಟಾರ್ ನಟರು ಭಗತ್ ಸಿಂಗ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರನ್ನ ರಂಜಿಸುವುದರ ಜೊತೆಗೆ ದೇಶಭಕ್ತಿ ಹೆಚ್ಚು ಮಾಡಿದ್ದಾರೆ. ಶಮಿ ಕಪೂರ್, ಮನೋಜ್ ಕುಮಾರ್, ಅಜಯ್ ದೇವಗನ್, ಬಾಬಿ ಡಿಯೋಲ್ ಮತ್ತು ಸೋನು ಸೂದ್ ತೆರೆ ಮೇಲೆ ಥೇಟ್ ಭಗತ್ ಸಿಂಗ್ ರಂತೆಯೇ ಕೆಚ್ಚೆದೆಯ ಭಾರತೀಯನಾಗಿ ನಟಿಸಿದ್ದಾರೆ. 
ಯುವ ಜನತೆಯ ಆದರ್ಶವಾಗಿರೋ ಭಗತ್ ಸಿಂಗ್ ನಿಜ ಜೀವನದಲ್ಲಿ ಮಾತ್ರವಲ್ಲ ಸಿನಿಮಾದಲ್ಲಿಯೂ ಸೋತಿಲ್ಲ. ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಗಳಿಕೆ ಮಾಡುವುದರ ಜೊತೆಗೆ ಪ್ರಶಸ್ತಿಯನ್ನೂ ಬಾಚಿಕೊಂಡಿವೆ. 

Related Video