ಪೊನ್ನಿಯಿನ್ ಸೆಲ್ವನ್, ಬಾಹುಬಲಿಯನ್ನೂ ಮೀರಿಸುತ್ತಾ ಈ ಐತಿಹಾಸಿಕ ಕಥೆ?

ಬಾಹುಬಲಿ, ಆರ್‌ಆರ್‌ಆರ್‌, ಕೆಜಿಎಫ್ ನೋಡಾಯ್ತು. ವಿಕ್ರಾಂತ್ ರೋಣ ಇನ್ನೇನು ಥಿಯೇಟರ್ ಅಂಗಳಕ್ಕೆ ಬರೋದಷ್ಟೇ ಭಾಗಿ. ಈಗ ದೇಶಾದ್ಯಂತ ಶುರುವಾಗ್ತಿದೆ ಪೊನ್ನಿಯಿನ್ ಸೆಲ್ವನ್ ಜ್ವರ. 9ನೇ ಶತಮಾನ ಐತಿಹಾಸಿಕ ಕಥೆಯ ಪೊನ್ನಿಯಿನ್ ಸೆಲ್ವನ್ ಸಿನಿಮಾ ಬೆಳ್ಳಿತೆರೆಗೆ ಬರೋದಕ್ಕೆ ಸಿದ್ದವಾಗಿದೆ. ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ. 

First Published Jul 10, 2022, 4:48 PM IST | Last Updated Jul 10, 2022, 4:54 PM IST

ಬಾಹುಬಲಿ, ಆರ್‌ಆರ್‌ಆರ್‌, ಕೆಜಿಎಫ್ ನೋಡಾಯ್ತು. ವಿಕ್ರಾಂತ್ ರೋಣ ಇನ್ನೇನು ಥಿಯೇಟರ್ ಅಂಗಳಕ್ಕೆ ಬರೋದಷ್ಟೇ ಭಾಗಿ. ಈಗ ದೇಶಾದ್ಯಂತ ಶುರುವಾಗ್ತಿದೆ ಪೊನ್ನಿಯಿನ್ ಸೆಲ್ವನ್ ಜ್ವರ. 9ನೇ ಶತಮಾನ ಐತಿಹಾಸಿಕ ಕಥೆಯ ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾ ಬೆಳ್ಳಿತೆರೆಗೆ ಬರೋದಕ್ಕೆ ಸಿದ್ದವಾಗಿದೆ. ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ. 

ಏನು...! ಐಶ್ವರ್ಯಾ ರೈ ಕನ್ನಡಕ್ಕೆ ಬರ್ತಾರಂತಾ?

ಪೊನ್ನಿಯಿನ್ ಸೆಲ್ವನ್ ಈ ಹೆಸರು ಕೇಳಿದ್ರೆ ನೆನಪಾಗೋದು ಚೋಳರ ಕಾಲದ ಇತಿಹಾಸ. 9ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನಾಳಿದ ಚೋಳರ ಕಥೆಯೇ ಪೊನ್ನಿಯಿನ್ ಸೆಲ್ವನ್ ಚಿತ್ರ. ರಾಜರಾಜ ಚೋಳ ಮತ್ತು ಅವನ ಮಗನಾದ ರಾಜೇಂದ್ರ ಚೋಳನ ಕಥೆ ಈ ಸಿನಿಮಾದಲ್ಲಿದೆ. ಸಿಂಹಾಸನಕ್ಕಾಗಿ ನಡೆಯುವ ಭೀಕರ ಕದನದ ಕಥೆಯನ್ನ ರೋಚಕವಾಗಿ ಕಟ್ಟಿಕೊಡಲಾಗ್ತಿದೆ. ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಘತಕಾಲದ ಇತಿಹಾಸಕ್ಕೆ ಬಣ್ಣ ಕಟ್ಟಿದ್ದಾರೆ ನಿರ್ದೇಶಕ ಮಣಿರತ್ನಂ.

ಎರಡು ಪಾರ್ಟ್ ಆಗಿ ಬರುತ್ತಿರೋ ಪೊನ್ನಿಯಿನ್ ಸೆಲ್ವನ್ ಕನ್ನಡ ಸೇರಿ ಐದು ಭಾಷೆಯಲ್ಲಿ ಬರ್ತಿದೆ. ಕನ್ನಡ ಟೀಸರ್‌ನ್ನು ನಟ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಮೊದಲ ಭಾಗದ ಟೀಸರ್ನಲ್ಲಿ 9ನೇ ಶತಮಾನದ ಸೆಟ್‌ಗಳು, ಅದಕ್ಕೆ ಹೊಂದುವಂತಹ ಪಾತ್ರಗಳು ಮಂತ್ರಮುಗ್ಧರನ್ನಾಗಿಸುತ್ತೆ. 

Ponniyin Selvan: ಐಶ್ವರ್ಯಾ ಲುಕ್‌ಗೆ ಫ್ಯಾನ್ಸ್ ಫಿದಾ, ಉಳಿದವರ ಗೆಟಪ್ ಹೇಗಿದೆ?

ಚಿತ್ರದಲ್ಲಿ ಟಾಲಿವುಡ್, ಕಾಲಿವುಡ್, ಬಾಲಿವುಡ್ ಬಿಗ್ ಸ್ಟಾರ್ಸ್ ಬಣ್ಣ ಹಚ್ಚಿದ್ದು, ಆದಿತ ಕರಿಕಾಳನ್ ಪಾತ್ರದಲ್ಲಿ ನಟ ವಿಕ್ರಂ ನಟಿಸಿದ್ರೆ, ಅರುಲ್ಮೋಳಿ ವರ್ಮನ್ ಆಗಿ ಜಯಂ ರವಿ ಅಭಿನಯಿಸಿದ್ದಾರೆ. ವಲ್ಲವರಾಯನ್ ವಂದಿಯಾ ದೇವನ್ ಆಗಿ ಕಾರ್ತಿ ಬಣ್ಣ ಹಚ್ಚಿದ್ರೆ, ನಂದಿನಿ ಮತ್ತು ಮಂದಾಕಿನಿ ದೇವಿ ಪಾತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ಕಾಣಿಸಿದ್ದಾರೆ.  ಇನ್ನು ಕುಂದವೈ ಪಿರತ್ತಿಯಾರ್ ರಾಣಿಯಾಗಿ ತ್ರಿಷಾ ಮಿಂಚಿದ್ರೆ, ಸುಂದರ ಚೋಳನಾಗಿ ಪ್ರಕಾಶ್ ರಾಜ್ರನ್ನ ನೋಡ್ಬಹುದು.

Video Top Stories