ಕೋಟಿಗೊಬ್ಬ ನಾಯಕಿ ಮಡೊನ್ನಾ ನಟನೆ ಮಾತ್ರವಲ್ಲ, ಹಾಡೋದ್ರಲ್ಲೂ ಸೂಪರ್

ಕಿಚ್ಚ ಸುದೀಪ್ ಜೊತೆ ಕೋಟಿಗೊಬ್ಬ 3 ಸಿನಿಮಾದಲ್ಲಿ ನಟಿಸಿರುವ ನಟಿಯ ಬಗ್ಗೆ ನಿಮಗೆ ಗೊತ್ತಾ ? ಈ ಹೀರೋಯಿನ್ ಯಾವ ಭಾಷೆಯವರು ? ಇವರು ಸಿಕ್ಕಾಪಟ್ಟೆ ಬ್ಯುಸಿ ಅಂತಾನೂ ಹೇಳಲಾಗುತ್ತದೆ. ಅಷ್ಟಕ್ಕೂ ಯಾವ ಭಾಷೆ ಸಿನಿಮಾಗಳಲ್ಲಿ ಇವರು ಬ್ಯುಸಿ ಇದ್ದಾರೆ ನೋಡಿ.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಜೊತೆ ಕೋಟಿಗೊಬ್ಬ 3(Kotigobba 3) ಸಿನಿಮಾದಲ್ಲಿ ನಟಿಸಿರುವ ನಟಿಯ ಬಗ್ಗೆ ನಿಮಗೆ ಗೊತ್ತಾ ? ಈ ಹೀರೋಯಿನ್ ಯಾವ ಭಾಷೆಯವರು ? ಇವರು ಸಿಕ್ಕಾಪಟ್ಟೆ ಬ್ಯುಸಿ ಅಂತಾನೂ ಹೇಳಲಾಗುತ್ತದೆ. ಅಷ್ಟಕ್ಕೂ ಯಾವ ಭಾಷೆ ಸಿನಿಮಾಗಳಲ್ಲಿ ಇವರು ಬ್ಯುಸಿ ಇದ್ದಾರೆ ನೋಡಿ.

ಬಿಡುಗಡೆಗೆ ಮುನ್ನವೇ ಕೋಟಿಗೊಬ್ಬ 3 ಪೈರಸಿ? ಗೃಹ ಸಚಿವರಿಗೆ ದೂರಿತ್ತ ನಿರ್ಮಾಪಕ

ಸಖತ್ ಬ್ಯುಸಿ ಆದ ಕೋಟಿಗೊಬ್ಬ 3 ಸಿನಿಮಾ ನಾಯಕಿ ಮಡೊನ್ನಾ (Madonna Sebastian ) ಮಾಲಿವುಡ್‌ನ ಫೇಮಸ್ ನಟಿ. ಇವರು ನಟಿ ಹಾಗೂ ಗಾಯಕಿಯೂ ಹೌದು. 2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಇದುವರೆಗೆ 15 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವುಗಳು ಮಲಯಾಳಂ ಹಾಗೂ ತಮಿಳು ಸಿನಿಮಾಗಳು. ಈಗ ಕಿಚ್ಚನ ಜೊತೆ ತೆರೆ ಹಂಚಿಕೊಂಡು ಚಂದನವನಕ್ಕೆ ಕಾಲಿಟ್ಟಿದ್ದಾರೆ. ಮಡೊನ್ನಾ ಮೊದಲು ನಿರೂಪಕಿಯಾಗಿದ್ದರು. ಅವರ ಸೌಂದರ್ಯ ಹಾಗೂ ಪ್ರತಿಭೆಯಿಂದಾಗಿ ಅವರು ಸಿನಿಮಾಗೆ ಕಾಲಿಟ್ಟಿದ್ದಾರೆ.

Related Video