ಬಿಡುಗಡೆಗೆ ಮುನ್ನವೇ ಕೋಟಿಗೊಬ್ಬ 3 ಪೈರಸಿ? ಗೃಹ ಸಚಿವರಿಗೆ ದೂರಿತ್ತ ನಿರ್ಮಾಪಕ
* ಕೋಟಿಗೊಬ್ಬ 3 ಸಿನಿಮಾದ ಮೇಲೆ ಪೈರೆಸಿ ಕಣ್ಣು
* ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು ನೀಡಿದ ನಿರ್ಮಾಪಕ ಸೂರಪ್ಪ ಬಾಬು
* ಅಕ್ಟೋಬರ್ 14ಕ್ಕೆ ಕೋಟಿಗೊಬ್ಬ 3 ಬಿಡುಗಡೆ ಆಗ್ತಿದೆ
* ಸಿನಿಮಾ ಬಿಡುಗಡೆ ಆಗೋ ಮೊದಲೇ ಸಿನಿಮಾ ಪೈರೆಸಿ !
ಬೆಂಗಳೂರು(ಸೆ. 29) ಕೊರೋನಾ(Coronavirus) ಒಂದು ಹಂತದ ಆತಂಕ ನಿವಾರಣೆಯ ನಂತರ ಸ್ಯಾಂಡಲ್ ವುಡ್(Sandalwood) ನಲ್ಲಿ ಬಿಗ್ ಬಜೆಟ್ ಸಿನಿಮಾಗಳುನ ತೆರೆಗೆ ಬರಲು ಸಿದ್ಧವಾಗಿವೆ. ಈ ನಡುವೆ ಮತ್ತೆ ಪೈರಸಿ ಭೂತ ಕಾಡಲು ಆರಂಭಿಸಿದೆ.
ಕಿಚ್ಚ ಸುದೀಪ್ (Sudeep) ಅಭಿನಯದ ಕೋಟಿಗೊಬ್ಬ 3 (Kotigobba 3 ) ಸಿನಿಮಾಕ್ಕೆ ಪೈರಸಿ ಕಾಟ ಶುರುವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರಗೆ (Araga Jnanendra) ನಿರ್ಮಾಪಕ ಸೂರಪ್ಪ ಬಾಬು ದೂರು ನೀಡಿದ್ದಾರೆ.
'ಯಜಮಾನ, ಅಸುರ ಸಿನಿಮಾ ಟಿಕೆಟ್ ಬ್ಲಾಕ್ ನಲ್ಲಿ ಮಾರಿದ್ದೆ'
ಅಕ್ಟೋಬರ್ 14ಕ್ಕೆ ಕೋಟಿಗೊಬ್ಬ 3 ಬಿಡುಗಡೆ ಆಗ್ತಿದೆ. ಸಿನಿಮಾ ಬಿಡುಗಡೆ ಆಗೋ ಮೊದಲೇ ಸಿನಿಮಾ ಪೈರೆಸಿ(piracy) ಮಾಡೋ ವೆಬ್ ಸೈಟ್ ಗಳು ಹುಟ್ಟಿಕೊಂಡಿವೆ. ಕೋಟಿಗೊಬ್ಬ 3 ನೋಡಲು ವೆಬ್ ಸೈಟ್ ಗೆ ಲಾಗಿನ್ ಆಗಿ ಎಂದು ಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಪೈರೆಸಿಯನ್ನ ತಡೆಯುವಂತೆ ಗೃಹಸಚಿವರಿಗೆ ಸೂರಪ್ಪ ಬಾಬು ಮನವಿ ಮಾಡಿಕೊಂಡಿದ್ದಾರೆ.
ದುನಿಯಾ ವಿಜಯ್ ಸಲಗ ಮತ್ತು ಕೋಟಿಗೊಬ್ಬ ಒಂದೇ ದಿನ ಬಿಡುಗಡೆಯಾಗುತ್ತಲಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಸೂಪರ್ ಹಿಟ್ ಚಿತ್ರವಾಗಿತ್ತು. ಇದಾದ ಮೇಲೆ ಕಿಚ್ಚ ಸುದೀಪ್ ಕೋಟಿಗೊಬ್ಬ 2 ನಲ್ಲಿ ಮಿಂಚಿದ್ದರು. ಈಗ ಕೋಟಿಗೊಬ್ಬ 3 ತೆರೆಗೆ ಬರಲು ಸಿದ್ಧವಾಗಿದೆ.
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೂ ಪೈರಸಿ ಕಾಟ ಎದುರಾಗಿತ್ತು. ಸಿನಿಮಾ ಬಿಡುಗಡೆ ದಿನವೇ ಸೋಶಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಪೈರಸಿ ಮಾಡಲಾಗಿತ್ತು. ಆಧುನಿಕತೆ ಮತ್ತು ತಂತ್ರಜ್ಞಾನದ ಬೆಳವಣಿಗೆ ಸಿನಿಮಾ ಲೋಕಕ್ಕೆ ಒಂದು ರೀತಿಯಲ್ಲಿ ಮಾರಕವಾಗಿಯೇ ಪರಿಣಮಿಸಿದೆ. ದಯವಿಟ್ಟು ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ತೆರಳಿ ನೋಡಿ ಆನಂದಿಸಿ...