ತಮಿಳುನಾಡಿನಲ್ಲಿ ‘ದಳಪತಿ’ ಕ್ರೇಜ್: ರಾಜಕೀಯಕ್ಕೆ ವಿಜಯ್ ಎಂಟ್ರಿ?
ಕಾಲಿವುಡ್ ದಳಪತಿ ವಿಜಯ್ ರಾಜಕೀಯ ಎಂಟ್ರಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ದಳಪತಿ ವಿಜಯ್ 2026ರಲ್ಲಿ ನಡೆಯುವ ತಮಿಳುನಾಡು ಚುನಾವಣೆಯಲ್ಲಿ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂದು ವರದಿ ಆಗಿದೆ. ವಿಜಯ್ 234 ವಿಧಾನಸಭಾ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಂಡು ಪ್ರತಿ ಕ್ಷೇತ್ರದ 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರಿಗೆ ಸನ್ಮಾನ ಕಾರ್ಯಕ್ರಮ ಮಾಡುತ್ತಿದ್ದಾರೆ. ‘ವಿಜಯ್ ಮಕ್ಕಳ್ ಇಯಕ್ಕಮ್’ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದ್ದು, ಇದೆಲ್ಲವೂ ವಿಜಯ್ ರಾಜಕೀಯ ಎಂಟ್ರಿಯ ಪೂರ್ವಭಾವಿ ತಯಾರಿ ಎಂದೇ ವರದಿಯಾಗುತ್ತಿದೆ. ಸದ್ಯ ಲಿಯೋ ಸಿನಿಮಾದಲ್ಲಿ ವಿಜಯ್ ಬಿಜಿಯಾಗಿದ್ದಾರೆ.