Vishal with Girl: ವಿದೇಶದಲ್ಲಿ ಯುವತಿ ಜೊತೆ ಸಿಕ್ಕಿಬಿದ್ರಾ ನಟ ವಿಶಾಲ್? ಮುಖ ಮುಚ್ಚಿಕೊಂಡು ಓಡಿದ್ದೇಕೆ ಕಾಲಿವುಡ್ ಸ್ಟಾರ್?
ನ್ಯೂಯಾರ್ಕ್ನಲ್ಲಿ ಯುವತಿ ಜೊತೆ ಸಿಕ್ಕಿಬಿದ್ದ ವಿಶಾಲ್
ವಿಶಾಲ್ ಜೊತೆ ಕಾಣಿಸಿಕೊಂಡ ಆ ಯುವತಿ ಯಾರು?
ಮುಖ ಮುಚ್ಚಿಕೊಂಡು ಓಡಿದ್ದೇಕೆ ಕಾಲಿವುಡ್ ಸ್ಟಾರ್?
ಕಾಲಿವುಡ್ ನಟ ವಿಶಾಲ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸದ್ಯ ವಿಶಾಲ್(Actor Vishal) ನ್ಯೂಯಾರ್ಕ್‌ನಲ್ಲಿದ್ದು(New York), ಈತ ಮಾಲ್ವೊಂದರ ಒಳಗಿಂದ ಹುಡುಗಿಯ ಜೊತೆ ಹೊರಗೆ ಬರುವುದು. ನೀವು ವಿಶಾಲ್ ಅಲ್ವಾ? ಎನ್ನುತ್ತಿದ್ದಂತೆ ಮುಖ ಮುಚ್ಚಿಕೊಂಡು ಓಡಿ ಹೋಗುವಂತಹ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ, ವಿಶಾಲ್ ಜೊತೆ ಕಾಣಿಸಿಕೊಂಡ ಆ ಯುವತಿ ಯಾರು? ಏನ್ ಕಥೆ? ಎಂದು ಕೆಲವರು ಕೇಳುತ್ತಿದ್ದಾರೆ. ಹಾಗೆ ವಿಡಿಯೋದಲ್ಲಿರೋದು ವಿಶಾಲ್ ಹೌದೋ ಅಲ್ವೋ ಎಂದು ಚರ್ಚಿಸುವವರು ಇದ್ದು, ಮತ್ತೆ ಕೆಲವರು ಇದು ಫೇಕ್ ವಿಡಿಯೋ ಎನ್ನುತ್ತಿದ್ದಾರೆ. ಇನ್ನೂ ಹಲವರು ಸಿನಿಮಾ ಪಬ್ಲಿಸಿಟಿಗಾಗಿ ಈ ರೀತಿಯ ವಿಡಿಯೋ ವೈರಲ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ವಿಶಾಲ್ ಮದುವೆ(Marriage) ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಹಿಂದೆ ಕೆಲ ನಟಿಯರ ಜೊತೆಗೂ ವಿಶಾಲ್ ಹೆಸರು ತಳುಕು ಹಾಕಿಕೊಂಡಿದ್ದು, ಅದರಲ್ಲಿ ವರಲಕ್ಷ್ಮಿ ಶರತ್ಕುಮಾರ್, ಲಕ್ಷ್ಮಿ ಮೆನನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಇಷ್ಟೇ ಅಲ್ಲದೇ ನಟಿ ಅಭಿನಯ ಜೊತೆ ಮದುವೆ ಆಗುತ್ತಾರೆ ಎನ್ನುವ ವದಂತಿಗಳನ್ನು ಹರಿಬಿಡಲಾಗಿತ್ತು. ಇದಕ್ಕೂ ಮುಂಚೆ ಅನಿಶಾ ಎಂಬಾಕೆಯ ಜೊತೆ ನಟ ವಿಶಾಲ್ ಎಂಗೇಜ್‌ಮೆಂಟ್ ಕೂಡ ನಡೆದಿದ್ದು, ಆದರೆ ಕಾರಣಾಂತರಗಳಿಂದ ಅದು ಮುರಿದುಬಿದ್ದಿತ್ತು.
ಇದನ್ನೂ ವೀಕ್ಷಿಸಿ: Salaar: ಆರೇ ದಿನದಲ್ಲಿ ಸಲಾರ್ ಹೊಸ ರೆಕಾರ್ಡ್..! ಬಾಕ್ಸಾಫೀಸ್‌ನಲ್ಲಿ ಗೆದ್ದ ಡಾರ್ಲಿಂಗ್ ಪ್ರಭಾಸ್..!