ತೆರೆ ಮೇಲೆ ಒಂದಾಗುತ್ತಿದ್ದಾರೆ ಕಿಚ್ಚ- ಸಲ್ಲು, ಮೋಡಿ ಮಾಡುತ್ತಾ ದಬಾಂಗ್-3 ಜೋಡಿ!

2019ರಲ್ಲಿ ಸಲ್ಮಾನ್ ಖಾನ್ ನಟನೆಯ ‘ದಬಾಂಗ್ 3’ (Dubbangg 3) ಚಿತ್ರ ತೆರೆಗೆ ಬಂತು. ಈ ಸಿನಿಮಾದಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದು, ಆ ಪಾತ್ರದಿಂದ ಕಿಚ್ಚನ ಅಭಿನಯ ಕಂಡು ಭಾರತೀಯ ಚಿತ್ರ ಪ್ರೇಮಿಗಳು ಕೊಂಡಾಡಿದ್ದು ಇನ್ನು ಕಣ್ಣ ಮುಂದೆಯೇ ಇದೆ.

First Published Aug 1, 2022, 1:46 PM IST | Last Updated Aug 1, 2022, 1:46 PM IST

2019ರಲ್ಲಿ ಸಲ್ಮಾನ್ ಖಾನ್ ನಟನೆಯ ‘ದಬಾಂಗ್ 3’ (Dubbangg 3) ಚಿತ್ರ ತೆರೆಗೆ ಬಂತು. ಈ ಸಿನಿಮಾದಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದು, ಆ ಪಾತ್ರದಿಂದ ಕಿಚ್ಚನ ಅಭಿನಯ ಕಂಡು ಭಾರತೀಯ ಚಿತ್ರ ಪ್ರೇಮಿಗಳು ಕೊಂಡಾಡಿದ್ದು ಇನ್ನು ಕಣ್ಣ ಮುಂದೆಯೇ ಇದೆ. 

ಯಶ್, ಕಿಚ್ಚನ ಸಿನಿಮಾ ಸಕ್ಸಸ್‌ಗೆ ಕಾರಣ ಇವರೇನಾ..?

ಇದೀಗ ವಿಕ್ರಾಂತ್ ರೋಣ ಸಿನಿಮಾವನ್ನ ಸಲ್ಮಾನ್ ಖಾನ್ ಹಿಂದಿಯಲ್ಲಿ ರಿಲೀಸ್ ಮಾಡಿದ್ದು ಕಿಚ್ಚನಿಗೆ ಆನೆ ಬಲ ಬಂದಂತಾಗಿದೆ. ಸಲ್ಮಾನ್ ಖಾನ್ ಜತೆಗಿನ ಸಿನಿಮಾ ಬಗ್ಗೆ ಸುದೀಪ್ ಅಪ್ಡೇಟ್ ಕೊಟ್ಟಿದ್ದಾರೆ. ಸುದೀಪ್ ಬಾಕ್ಸಾಫೀಸ್ ಸುಲ್ತಾನ್ ಸಲ್ಲುಗೆ ನಿರ್ದೇಶನ ಮಾಡೋ ಆಸೆಯನ್ನ ಮತ್ತೆ ಹೊರ ಹಾಕಿದ್ದರು.

ಒಂದೇ ಸಿನಿಮಾ, ಆರು ರೆಕಾರ್ಡ್: ದಾಖಲೆಗಳ ಸರದಾರ ಕಿಚ್ಚ ಸುದೀಪ್

ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದ ವೇಳೆ ಮಾತನಾಡುವಾಗ ಕಿಚ್ಚ, ಸಲ್ಲುಗೆ ಡೈರೆಕ್ಷನ್ ಮಾಡುವ ಬಗ್ಗೆ ಮಾತನಾಡಿದ್ದು, ‘ಕಳೆದ ವರ್ಷವೇ ಇದಕ್ಕೆ ಪ್ರಕ್ರಿಯೆ ಆರಂಭ ಆಗಿದೆ. ನೀವು ಇನ್ನೂ ಸ್ವಲ್ಪ ಸಮಯ ಇದಕ್ಕಾಗಿ ಕಾಯಬೇಕಾಗುತ್ತದೆ ಎಂದಿದ್ದಾರೆ. ಇದೀಗ ಕಿಚ್ಚ-ಸಲ್ಲು ಫ್ರೆಂಡ್ಸ್ ಶಿಪ್ಗೆ ಸಾಕ್ಷಿಯಾಗಿ ಈ ಸಿನಿಮಾ ಯಾವಾಗ ಶುರುವಾಗುತ್ತೆ ಅನ್ನೋ ಕುತೂಹಲ ಇಬ್ಬರ ಅಭಿಮಾನಿಗಳಲ್ಲೂ ಹುಟ್ಟಿದೆ.