ಪ್ರೊ. ನಂಜುಂಡಸ್ವಾಮಿ ಬಯೋಪಿಕ್‌ನಲ್ಲಿ ಕಿಚ್ಚ ಸುದೀಪ್?

ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಬಯೋಪಿಕ್ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಐದಾರು ವರ್ಷಗಳಿಂದ ಹಲವು ಹಂತಗಳಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಸದ್ಯ ಸ್ಕ್ರಿಪ್ಟ್ ತಯಾರಿ ಹಂತದಲ್ಲಿದೆ.

Share this Video
  • FB
  • Linkdin
  • Whatsapp

ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಬಯೋಪಿಕ್ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಐದಾರು ವರ್ಷಗಳಿಂದ ಹಲವು ಹಂತಗಳಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಸದ್ಯ ಸ್ಕ್ರಿಪ್ಟ್ ತಯಾರಿ ಹಂತದಲ್ಲಿದೆ. ಮುಂದಿನ ಹಂತಕ್ಕಾಗಿ ಹಲವು ಕಸರತ್ತುಗಳನ್ನು ಮಾಡುತ್ತಿದ್ದಾರೆ ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ. ಈ ಬಯೋಪಿಕ್ ನಲ್ಲಿ ನಟಿಸಲು ಅನೇಕರ ಹೆಸರು ಕೇಳಿಬರುತ್ತಿದೆ. ನಾನಾ ಪಾಟೇಕರ್, ಧಯನಂಜಯ್ ಹೆಸರು ಕೂಡ ಇದೆ. ಇದೀಗ ಅಭಿಮಾನಿಗಳು ಕಿಚ್ಚನ ಹೆಸರು ಹೇಳುತ್ತಿದ್ದಾರೆ. ನಂಜುಂಡಸ್ವಾಮಿ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ನಂಜುಂಡಸ್ವಾಮಿ ಪತ್ನಿ ಪಾತ್ರದಲ್ಲಿ ರಮ್ಯಾ ನಟಿಸಲಿ ಎನ್ನುವುದು ಅಭಿಮಾನಿಗಳ ಆಸೆ. ಈ ಆಸೆ ನೆರವೇರುತ್ತಾ ಎಂದು ಕಾದುನೋಡಬೇಕಿದೆ.

Related Video