Asianet Suvarna News Asianet Suvarna News

ಗೋವಾ ಸಮುದ್ರ ತೀರದಲ್ಲಿ KGF 2 ತಂಡದ ಗೆಲುವಿನ ಸಂಭ್ರಮ

ಕೆಜಿಎಫ್ ಚಾಪ್ಟರ್-2 ಸಿನಿಮಾ 1000 ಕೋಟಿ ಕಲೆಕ್ಷನ್ ಸಮೀಪಿಸಿದೆ. ರಾಕಿ ಭಾಯ್ ಈಗ ಬಾಕ್ಸ್ ಆಫೀಸ್ ನಲ್ಲಿ ಸಾವಿರ ಕೋಟಿಯ ಒಡೆಯನಾಗುತ್ತಿದ್ದಾನೆ. ಹೀಗಾಗಿ ಕೆಜಿಎಫ್ ಕೋಟೆ ಕಟ್ಟಿದ್ದ ಟೀಂ ಈಗ ಭರ್ಜರಿ ಪಾರ್ಟಿ ಮಾಡಿ ಸಂಭ್ರಮಿಸಿದೆ.

ತನ್ನಮ್ಮನ ಆಸೆ ಈಡೇರಿಸಬೇಕು ಅಂತ ಚಿನ್ನದ ಬೇಟೆಗಾಗಿ KGF 2 ನರಾಚಿಗೆ ಬಂದಿದ್ದ ರಾಕಿ KGF 2ನಲ್ಲಿ ಇದ್ದ ಬದ್ದ ಚಿನ್ನವನ್ನೆಲ್ಲಾ ದೋಚಿಕೊಂಡು ಸಮುದ್ರ ಸೇರಾಗಿದೆ. ರಾಕಿ ಚಿನ್ನಕ್ಕಾಗಿ ಮಾಡೋ ಶೌರ್ಯದ ಕಥೆ ನೋಡಿ ಇಡೀ ಭಾರತೀಯ ಸಿನಿ ರಸಿಕರು KGF 2ಗೆ ಉಘೇ ಉಘೇ ಎಂದಿದ್ದಾರೆ. ಇದರ ಫಲ ಕೆಜಿಎಫ್ ಚಾಪ್ಟರ್-2 ಸಿನಿಮಾ 1000 ಕೋಟಿ ಕಲೆಕ್ಷನ್ ಸಮೀಪಿಸಿದೆ. ಈ ಮೂಲಕ ರಾಕಿ ಭಾಯ್ ಈಗ ಬಾಕ್ಸ್ ಆಫೀಸ್ ನಲ್ಲಿ ಸಾವಿರ ಕೋಟಿಯ ಒಡೆಯನಾಗುತ್ತಿದ್ದಾನೆ. ಹೀಗಾಗಿ ಕೆಜಿಎಫ್ ಕೋಟೆ ಕಟ್ಟಿದ್ದ ಟೀಂ ಈಗ ಭರ್ಜರಿ ಪಾರ್ಟಿ ಮಾಡಿ ಸಂಭ್ರಮಿಸಿದೆ.

 

Video Top Stories