
ಕಾಂತಾರ ಚಿತ್ರ ನೋಡಿ ಥಿಯೇಟರ್ನಲ್ಲಿ ಹುಚ್ಚಾಟ: ಹುಚ್ಚು ಕಟ್ಟಿದವರಿಗೆ ಹುಚ್ಚು ಹಿಡಿಸುತ್ತೇನೆ ಎಂದ ದೈವ!
ಕಾಂತಾರ ಈಗ ಬರೀ ಸಿನಿಮಾ ಮಾತ್ರವೇ ಅಲ್ಲ, ಕರ್ನಾಟಕದ ಪ್ರೈಡ್.. ಕರಾವಳಿ ಸಂಪ್ರದಾಯ-ಆಚರಣೆಗಳನ್ನ ವಿಶ್ವದೆಲ್ಲೆಡೆ ಪರಿಚಯಿಸಿರೋ ಅದ್ಭುತ. ಕಾಂತಾರ ಸಿನಿಮಾ ಕವರ್ ಮಾಡೋ ಸಬ್ಜೆಕ್ಟ್ ಇದ್ಯಲ್ಲಾ, ಅದು ಅತ್ಯಂತ ಪವಿತ್ರವಾದ್ದು.
ಕಾಂತಾರ ಈಗ ಬರೀ ಸಿನಿಮಾ ಮಾತ್ರವೇ ಅಲ್ಲ, ಕರ್ನಾಟಕದ ಪ್ರೈಡ್.. ಕರಾವಳಿ ಸಂಪ್ರದಾಯ-ಆಚರಣೆಗಳನ್ನ ವಿಶ್ವದೆಲ್ಲೆಡೆ ಪರಿಚಯಿಸಿರೋ ಅದ್ಭುತ. ಕಾಂತಾರ ಸಿನಿಮಾ ಕವರ್ ಮಾಡೋ ಸಬ್ಜೆಕ್ಟ್ ಇದ್ಯಲ್ಲಾ, ಅದು ಅತ್ಯಂತ ಪವಿತ್ರವಾದ್ದು. ಆದ್ರೆ ಕಾಂತಾರ ಅಧ್ಯಾಯ ಒಂದು ಸಿನಿಮಾ ಬಂದ ಮೇಲೆ ದೈವದ ಹೆಸರಲ್ಲಿ ಅಪಹಾಸ್ಯ ಮಾಡೋ ಸಂಖ್ಯೆ ಹೆಚ್ಚಾಗಿದೆ. ಹಾಗೆ 'ಹುಚ್ಚು ಕಟ್ಟಿದವರಿಗೆ ಹುಚ್ಚು ಹಿಡಿಸುತ್ತೇನೆ ಎಂದು ಪಲ್ಚಂಡಿ ದೈವ ಎಚ್ಚರಿಕೆ ಕೊಟ್ಟಿದೆ. ಕಾಂತಾರ ಅಧ್ಯಾಯ ಒಂದು ಮನುಷ್ಯ ಮತ್ತು ಪ್ರಕೃತಿಯ ಮಧ್ಯೆ ದೈವದ ನಿಯಂತ್ರಣ ಎಂಥದ್ದು ಅಂತ ತೋರಿಸಿಕೊಡೋ ಸಿನಿಮಾ. ತೆಲುಗು ತಮಿಳು ಹಿಂದಿ ಸೇರಿದಂತೆ ಸಿನಿಮಾ ಪ್ರೇಕ್ಷಕರೆಲ್ಲಾ ದೈವದ ಮಹತ್ವವೇನು..? ದೈವಾರಧನೆ, ಭೂತ ಕೋಲಾ ಅನ್ನೋದೆಲ್ಲಾ ಹೇಗೆ ನಡೆಯುತ್ತೆ ಅಂತ ತಿಳಿದುಕೊಂಡಿದ್ದಾರೆ.
ಆದ್ರೆ ಸಿನಿಮಾ ಬಿಡುಗಡೆ ಬಳಿಕ ಮನೊರಂಜನೆಗಾಗಿ, ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಪಡೆಯಲು ದೈವದ ಅನುಕರಣೆ ಮಾಡೋ ಹುಚ್ಚಾಟ ಹೆಚ್ಚಾಗಿದೆ. ಇದಕ್ಕೆ ದೈವದ ಅನುಕರಣೆ ಮಾಡಿದ್ರೆ ಹುಷಾರ್ ಅನ್ನೋ ಎಚ್ಚರಿಕೊಂದು ಬಂದಿದೆ. ಕಾಂತಾರ ಅಧ್ಯಾಯ ಒಂದು ಸಿನಿಮಾ ನೋಡಿದ ಪ್ರೇಕ್ಷಕರೊಬ್ಬರು ತಮಿಳು ನಾಡಿ ಚಿತ್ರಮಂದಿರದಲ್ಲಿ ಪಂಜುರ್ಲಿ ದೈವದ ವೇಷ ಧರಿಸಿ ಬಂದಿದ್ದ. ಪಂಜುರ್ಲಿ ದೈವದ ಹಾಗೆ ಚಿತ್ರಮಂದಿರದ ತುಂಬೆಲ್ಲಾ ಕುಣಿದಿದ್ದಾನೆ. ಅಷ್ಟೆ ಅಲ್ಲ ಬೆಂಗಳೂರಿನಲ್ಲಿ ಚಿತ್ರಮಂದಿರದ ಹೊರಗೆ ಗುಳಿಗ ದೈವ ಮೈ ಮೇಲೆ ಬಂದಂತೆ ವ್ಯಕ್ತಿಯೊಬ್ಬ ಪ್ರಚಾರಕ್ಕಾಗಿ ನರ್ತಿಸಿದ್ದಾನೆ.
ಇದರ ಜೊತೆ ಸಿನಿಮಾ ನೋಡುತ್ತಲೇ ಮಹಿಳೆಯ ಮೇಲೆ ದೈವ ಆಹ್ವಾನ ಆದಂತೆ ವರ್ತಿಸುತ್ತಿರೋ ಘಟನೆಗಳು ನಡೆಯುತ್ತಿವೆ. ಇದನ್ನೆಲ್ಲಾ ಗಮನಿಸಿರೋ ದೈವ ನರ್ತಕರು. ಬೇಸರಗೊಂಡಿದ್ದು, ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಬಜಪೆ, ಪೆರಾರ, ಬ್ರಹ್ಮ ಬಲವಂಡಿ, ಪಿಲ್ಚಂಡಿ ದೈವಸ್ಥಾನಗಳಲ್ಲಿ ದೈವ ನರ್ತಕರು, ದೈವಾರಾಧಕರು ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ದೈವ ನರ್ತಕರು ಮತ್ತು ದೈವಾರಾಧಕರಿಗೆ ಪಿಲ್ಚಂಡಿ ದೈವ ನುಡಿ ಕೊಟ್ಟಿದೆ. ಸಿನಿಮಾ ನೋಡಿ ದೈವಕ್ಕೆ ಅಪಹಾಸ್ಯ ಆಗೋ ಹಾಗೆ ನಟಿಸೋರಿಗೆ ಎಚ್ಚರಿಕೆ ಕೊಟ್ಟಿದೆ.
'ಹುಚ್ಚು ಕಟ್ಟಿದವರಿಗೆ ಹುಚ್ಚು ಹಿಡಿಸುತ್ತೇನೆ 'ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನ ಆಸ್ಪತ್ರೆಗೆ ಸುರಿಸುತ್ತೇನೆ'' ನಿಮ್ಮ ಹಿಂದೆ ನಾನಿದ್ದೇನೆ ಹೋರಾಟ ಮುಂದುವರೆಸಿ ಎಂದು ದೈವದ ಎದುರು ನೋವು ತೋಡಿಕೊಂಡ ದೈವಾರಾಧಕರಿಗೆ ಪಿಲ್ಚಂಡಿ ದೈವದ ಅಭಯ ನುಡಿ ಕೊಟ್ಟಿದೆ. ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ: ಚಾಪ್ಟರ್ 1' ಸಿನಿಮಾವು ವಿಶ್ವಾದ್ಯಂತ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ನಾಲ್ಕೇ ದಿನಕ್ಕೆ 300+ ಕೋಟಿ ರೂಪಾಯಿಗಳನ್ನು ಗಲ್ಲಾ ಪೆಟ್ಟಿಗೆ ಬಾಚಿಕೊಂಡಿತ್ತು. ಇದೀಗ ಆರು ದಿನಗಳಿಗೆ 400 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ಗಳಿಸಿದೆ. ಒಂದ್ ಕಡೆ ಕಾಂತಾರ ಅಧ್ಯಾಯ ಒಂದು ಬಿಗ್ ಸಕ್ಸಸ್ ಆಗ್ತಿದ್ರೆ, ಮತ್ತೊಂದ್ ಕಡೆ ದೈವದ ಅನುಕರಣೆ ಮಾಡಿ ಅಪಹಾಸ್ಯ ಮಾಡೋ ಜನರು ಹೆಚ್ಚಾಗುತ್ತಿದ್ದು, ಅವರಿಗೆಲ್ಲಾ ಪಿಲ್ಚಂಡಿ ದೈವ ಎಚ್ಚರಿಕೆ ಕೊಟ್ಟಿದೆ.