ಪಕ್ಕದ ಚಿತ್ರರಂಗದಲ್ಲಿ ಕಣ್ಣು​ ತೆರೆದ ಕನ್ನಡ ಸ್ಟಾರ್ಸ್! ಯಾರು? ಯಾರು?

ಸ್ಯಾಂಡಲ್​ವುಡ್​​ ಸೌಂಡು ಮಾಯವಾಗಿದೆ. ಥಿಯೇಟರ್​ಗಳು ಪ್ರೇಕ್ಷಕ ಇಲ್ಲದೆ ಬಣಗುಡುತ್ತಿವೆ. ಹೊಸಬರ ಒಳ್ಳೆ ಸಿನಿಮಾಗಳು ಬಂದ್ರು ಜನ ಥಿಯೇಟರ್​ ಮರೆತಿದ್ದಾರೆ. ಸ್ಟಾರ್ಸ್​ಗಳು ಸಿನಿಮಾ ಮಾಡದೇ ಹೀಗಾಗಿದೆ ಅನ್ನೋ ಟಾಕ್​​ ಗಂಭೀರವಾಗಿದೆ. ಆದ್ರೆ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಕನ್ನಡದ ಸೂಪರ್​ ಸ್ಟಾರ್ಸ್​ಗಳು ಪರಭಾಷಾ ಚಿತ್ರರಂಗದಲ್ಲಿ ಮಿಂಚಿ ಮರೆದಾಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಆ ಲೀಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ಅಂತ ನೋಡೋಣ ಬನ್ನಿ.. 
 

Share this Video
  • FB
  • Linkdin
  • Whatsapp

ಸ್ಯಾಂಡಲ್​​ವುಡ್​ ಈಗ ವೆಂಟಿಲೇಸರ್​ನಲ್ಲಿದೆ. ಹೊಸಬರು ಬರಬೇಕು ಹೊಸ ಸಿನಿಮಾಗಳು ಗೆಲ್ಲಬೇಕು ಅನ್ನೋದು ಬರೀ ಬಾಯ್ ಮಾತಷ್ಟೇ ಆಗಿದೆ. ಹೊಸಬರ ಸಿನಿಮಾಗಳು ಗೆಲ್ಲಬೇಕು ಅಂದ್ರೆ ಹಳೇ ಬೇರುಗಳು ಗಟ್ಟಿಯಾಗಿ ನಿಲ್ಲಬೇಕು, ಸಿನಿಮಾಗಳನ್ನ ಮಾಡಬೇಕು ಸಿನಿಮಾದ ಕ್ರೇಜ್​ ಹಳಸದ ಹಾಗೆ ನೋಡಿ ಕೊಳ್ಳಬೇಕು. ಆದ್ರೆ ಸ್ಯಾಂಡಲ್​ವುಡ್​​ನಲ್ಲಿ ಅದ್ಯಾವುದು ಆಗುತ್ತಿಲ್ಲ. ಸ್ಟಾರ್​ ಹೀರೋಗಳು ಸಿನಿಮಾ ಮಾಡುತ್ತಿಲ್ಲ. ಮಾಡಿದ್ರು ವರ್ಷಕ್ಕೊಂದು ಮೂವಿ ಬಂದ್ರೆ ಆಶ್ಚರ್ಯ. ಆದ್ರೆ ಅವರೆಲ್ಲಾ ಪಕ್ಕದ ರಾಜ್ಯದ ಸಿನಿ ಜಗತ್ತಲ್ಲಿ ಶೈನ್ ಆಗೋಕೆ ಹೊರಟಿದ್ದಾರೆ. ಪರಭಾಷಾ ಸಿನಿ ರಂಗದಲ್ಲಿ ದೊಡ್ಡದಾಗಿ ಕಣ್ ತೆರೆಯುತ್ತಿದ್ದಾರೆ.

Related Video