Asianet Suvarna News Asianet Suvarna News

ಕಂಗನಾ ಧಾಕಡ್‌ಗೆ ಹೀನಾಯ ಸೋಲು; ಮೊದಲ ದಿನವೇ ಚಿತ್ರಮಂದಿರಗಳು ಖಾಲಿ ಖಾಲಿ

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ನಟನೆಯ ಧಾಕಡ್(Dhakad) ಸಿನಿಮಾ ಮೇ 20ರಂದು ಬಿಡುಗಡೆಯಾಗಿತ್ತು. ಆದರೆ ಕಂಗನಾ ನಟನೆಯ ಧಾಕಡ್ ಸಿನಿಮಾ ಹೀನಾಯ ಸೋತಿದೆ. ಧಾಕಡ್ ಸಿನಿಮಾ ನೋಡಲು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರೇ ಇಲ್ಲ. ಖಾಲಿ ಖಾಲಿ ಇದ್ದ ಚಿತ್ರಮಂದಿರಗಳಲ್ಲಿ ಕಾರ್ತಿಕ್ ಆರ್ಯನ್ ಭೂಲ್ ಭುಲೈಯಾ-2 ಪ್ರದರ್ಶನ ಮಾಡಲಾಗುತ್ತಿದೆ. ಕಂಗನಾ ಸಿನಿಮಾ ಈ ರೀತಿ ಹೀನಾಯ ಸೋತಿದ್ದು ನಿಜಕ್ಕೂ ಕಂಗನಾಗೆ ನುಂಗಲಾರದ ತುತ್ತಾಗಿದೆ.

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ನಟನೆಯ ಧಾಕಡ್(Dhakad) ಸಿನಿಮಾ ಮೇ 20ರಂದು ಬಿಡುಗಡೆಯಾಗಿತ್ತು. ಅದೇ ದಿನ ಬಾಲಿವುಡ್ ನಟ ಕಾರ್ತಿಕ್ ಆರ್ಯನ್(Kartik Aaryan) ಅಭಿನಯದ ಭೂಲ್ ಭುಲೈಯಾ-2(Bhool Bhulaiyaa 2) ಸಿನಿಮಾ ಕೂಡ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿತ್ತು. ಆದರೆ ಕಂಗನಾ ನಟನೆಯ ಧಾಕಡ್ ಸಿನಿಮಾ ಹೀನಾಯ ಸೋತಿದೆ. ಹೌದು, ಕಂಗನಾ ಸಿನಿಮಾ ಧಾಕಡ್ ನೆಲಕಚ್ಚಿದೆ. ಧಾಕಡ್ ಸಿನಿಮಾ ನೋಡಲು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರೇ ಇಲ್ಲ. ಖಾಲಿ ಖಾಲಿ ಇದ್ದ ಚಿತ್ರಮಂದಿರಗಳಲ್ಲಿ ಕಾರ್ತಿಕ್ ಆರ್ಯನ್ ಭೂಲ್ ಭುಲೈಯಾ-2 ಪ್ರದರ್ಶನ ಮಾಡಲಾಗುತ್ತಿದೆ. ಕಂಗನಾ ಸಿನಿಮಾ ಈ ರೀತಿ ಹೀನಾಯ ಸೋತಿದ್ದು ನಿಜಕ್ಕೂ ಕಂಗನಾಗೆ ನುಂಗಲಾರದ ತುತ್ತಾಗಿದೆ.