ವಿಕ್ರಮ್ ಚಿತ್ರದಿಂದ ಬಂದ ಹಣದಲ್ಲಿ ಸಾಲ ತೀರಿಸ್ತಾರಂತೆ ಕಮಲ್ ಹಾಸನ್!

ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೊಟಿ ಕಲೆಕ್ಷನ್ ಮಾಡಿದೆ. ಈಗಾಗಲೇ 300 ಕೋಟಿ ಗಳಿಕೆ ಮಾಡಿದ್ದು, ಈ ಹಣದಿಂದ ಕಮಲ್ ಹಾಸನ್ ತಮ್ಮ ಸಾಲವನ್ನ ತೀರಿಸುತ್ತಾರಂತೆ. 

Share this Video
  • FB
  • Linkdin
  • Whatsapp

ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೊಟಿ ಕಲೆಕ್ಷನ್ ಮಾಡಿದೆ. ಈಗಾಗಲೇ 300 ಕೋಟಿ ಗಳಿಕೆ ಮಾಡಿದ್ದು, ಈ ಹಣದಿಂದ ಕಮಲ್ ಹಾಸನ್ ತಮ್ಮ ಸಾಲವನ್ನ ತೀರಿಸುತ್ತಾರಂತೆ. ಇದೇ ಸಮಯದಲ್ಲಿ ಮನಸ್ಸಿಗೆ ತಕ್ಕಂತೆ ತಿನ್ನುತ್ತೇನೆ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಏನಾದರು ಕೊಡುತ್ತೇನೆ. ಬೇರೆಯವರ ಹಣ ಪಡೆದು ಇತರರಿಗೆ ಸಹಾಯ ಮಾಡುವಂತೆ ನಟಿಸಬೇಕಾಗಿಲ್ಲ. ನನಗೆ ಯಾವುದೇ ದೊಡ್ಡ ಬಿರುದುಗಳು ಬೇಡ. ನಾನು ಒಳ್ಳೆಯ ಮನುಷ್ಯನಾಗಲು ಬಯಸುತ್ತೇನೆ ಎಂದು ಕಮಲ್ ಹಾಸನ್ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ದೀಪಿಕಾ ಪಡುಕೋಣೆ: ಶೂಟಿಂಗ್ ಸಮಯದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಚಿತ್ರೀಕರಣ ಮಾಡುವಾಗ ಹೃದಯ ಬಡಿತ ಹೆಚ್ಚಳವಾದ ಕಾರಣ ಹೈದರಾಬಾದ್‌ನ ಕಾಮಿನೇನಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ದೀಪಿಕಾ 'ಪ್ರಾಜೆಕ್ಟ್ ಕೆ' ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು ಹೈದ್ರಾಬಾದ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. 

'ವಿಕ್ರಮ್' ಸೂಪರ್ ಸಕ್ಸಸ್; ಕನ್ನಡದಲ್ಲಿಯೇ ಧನ್ಯವಾದ ತಿಳಿಸಿದ ನಟ ಕಮಲ್ ಹಾಸನ್

ಆಸ್ಪತ್ರೆಗೆ ದಾಖಲಾದ ಜಾಕ್ ಮಂಜು: ಕನ್ನಡ ಸಿನಿಮಾ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ. 15 ದಿನಗಳ ಹಿಂದೆ ಮೆಟ್ಟಿಲು ಹತ್ತುವಾಗ ಜಾಕ್ ಮಂಜು ಜಾರಿ ಬಿದ್ದಿದ್ದು, ಆಗ ಅವರ ಕಾಲಿಗೆ ಪೆಟ್ಟಾಗಿತ್ತು. ನೋವು ಕಡಿಮೆ ಆಗದೇ ಇರುವುದರಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಜಾಕ್ ಮಂಜು ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ..

ತಾಯಿಯಿಂದ ಹೆರಿಗೆ ಮಾಡಿಸಿಕೊಂಡ ಪ್ರಣೀತಾ: ನಟಿ ಪ್ರಣೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗಷ್ಟೇ ಫೋಟೋ ಮೂಲಕ ಸಿಹಿ ವಿಚಾರವನ್ನ ಹಂಚಿಕೊಂಡಿದ್ದಾರೆ. ಇನ್ನು ಪ್ರಣೀತಾ ಅವರ ತಾಯಿ ಪ್ರಸೂತಿ ತಜ್ಞರಾಗಿದ್ದ ಕಾರಣ ತಾಯಿಯಿಂದಲೇ ಹೆರಿಗೆ ಮಾಡಿಸಿಕೊಂಡಿದ್ದಾರೆ ನಟಿ ಪ್ರಣೀತಾ. ಯಾವುದೇ ಹುಡುಗಿ ಕೇಳಬಹುದಾದ ಉತ್ತಮ ವಿಚಾರ ಅಂದ್ರೆ ಗೈನಕಲಾಜಿಸ್ಟ್ ಆಗಿರುವ ತಾಯಿ, ತನ್ನ ಮಗಳಿಗೆ ಹೆರಿಗೆ ಮಾಡಿಸುವುದು ಅತ್ಯಂತ ಸವಾಲಿನ ಸಂಗತಿ. ಭಾವನಾತ್ಮಕವಾಗಿ ಇದು ಕಠಿಣವಾದ ವಿಚಾರ. ಹೆರಿಗೆಯಲ್ಲಿ ಆಗುವ ಏರುಪೇರಿನ ಬಗ್ಗೆ ಚೆನ್ನಾಗಿ ಅವರಿಗೆ ತಿಳಿದಿರುತ್ತದೆ ಎಂದು ನಟಿ ಪ್ರಣಿತಾ ಹೇಳಿಕೊಂಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video