Indian 2 Movie Ticket Rate: ಪ್ರಭಾಸ್ ಸಿನಿಮಾ ನಂತರ ಕಮಲ್ ಹಾಸನ್ ಸಿನಿಮಾಗೂ ಯಾಕಿಷ್ಟು ಟಿಕೆಟ್ ರೇಟ್?

ಟಿಕೆಟ್ ರೇಟ್ ಜಾಸ್ತಿ ಎನ್ನೋ ತಲೆ ಬಿಸಿ ಇದೀಗ ಇಂಡಿಯನ್ 2ಗೂ ಶುರುವಾಗಿದೆ. ಮತ್ತೆ ಪ್ರೇಕ್ಷಕನ ಜೇಬಿಗೆ ಕತ್ತರಿ ಹಾಕುವ ಮತ್ತೊಂದು ಸಿನಿಮಾ ಬರ್ತಿದೆ. ಅದೇ ಕಮಲ್ ಹಾಸನ್ ಶಂಕರ್ ನಿರ್ದೇಶನದ ಬಹುನಿರೀಕ್ಷೆಯ ಸಿನಿಮಾ ಇಂಡಿಯನ್ 2.

First Published Jul 12, 2024, 10:04 AM IST | Last Updated Jul 12, 2024, 8:19 AM IST

ಐದುನೂರು ಆರುನೂರು ರೂಪಾಯಿ ಕೊಟ್ಟು ಕಲ್ಕಿ ಸಿನಿಮಾ ನೋಡಿದ್ದಾಗಿದೆ. ಈಗ ಅಷ್ಟೇ ದುಡ್ಡು ಕೊಟ್ಟು ಕಮಲ್ ಹಾಸನ್‌ರ(Kamal Haasan)  ‘ಇಂಡಿಯನ್ 2’ ಸಿನಿಮಾ ಕೂಡ ನೋಡಬೇಕು. 1996ರಲ್ಲಿ ರಿಲೀಸ್ ಆದ ‘ಇಂಡಿಯನ್’ ಸಿನಿಮಾದ(Indian 2 Movie) ಸೀಕ್ವೆಲ್ ಇಂಡಿಯನ್ 2. ಕಮಲ್ ಹಾಸನ್ ‘ಇಂಡಿಯನ್ 2’ ಚಿತ್ರದಲ್ಲಿ ಭಿನ್ನ ಗೆಟಪ್‌ಗಳನ್ನ ತಾಳಿದ್ದಾರೆ. ಇಂಡಿಯನ್ 2 ಬಗ್ಗೆ ಟಾಕ್ ಆಗ್ತಿದೆ. ಅದರಲ್ಲೂ ವಿಶೇಷವಾಗಿ ಸ್ಟಾರ್ ಡೈರೆಕ್ಟರ್ ಶಂಕರ್(Shankar) ಇಂಡಿಯನ್ 2ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲೂ ಕಮಲ್ ಹಾಸನ್, ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್ರಂತಹ ಸ್ಟಾರ್ ಕಲಾವಿದರಿದ್ದಾರೆ. ಸಿನಿಮಾದ ಮೇಕಿಂಗ್ ಕೂಡ ಅದ್ಧೂರಿಯಾಗಿದೆ. ಹೀಗಾಗಿ ಪ್ರಭಾಸ್‌ರ ಕಲ್ಕಿ ಹಾದಿಯಲ್ಲಿ ಕಮಲ್ ಹಾಸನ್ ಕಾಲಿಡುತ್ತಿದ್ದು, ಕಲ್ಕಿ ಟೆಕೆಟ್ ರೇಟ್(Ticket Rate) ಹೆಚ್ಚಿಸಿದಂತೆ ಇಂಡಿಯನ್ 2 ಸಿನಿಮಾ ಟಿಕೆಟ್ ದರ ಕೂಡ ಹೆಚ್ಚುಮಾಡುತ್ತಾರಂತೆ. ಕರ್ನಾಟಕ, ತೆಲಂಗಾಣ, ತಮಿಳು ನಾಡಿನಲ್ಲಿ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಿಸಲಾಗಿದೆ. ಇಂಡಿಯನ್ 2 ಸಿನಿಮಾಗೆ ಉದಯನಿಧಿ ಸ್ಟ್ಯಾಲಿನ್ ಹಾಗೂ ಶುಭಾಶ್ಕರನ್ 250 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಹೀಗಾಗಿ ಇಂದು ಬಿಡುಗಡೆ ಆಗುತ್ತಿರೋ  ‘ಇಂಡಿಯನ್ 2’ ಚಿತ್ರಕ್ಕೆ ತೆಲಂಗಾಣದ ಮಲ್ಟಿಪ್ಲೆಕ್ಸ್ನಲ್ಲಿ 75 ರೂಪಾಯಿ ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲೋ 50 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಂತೂ ಹೇಳುವವರಿಲ್ಲ, ಕೇಳುವವರೂ ಇಲ್ಲ. ಪಿವಿಆರ್‌ಗಳಲ್ಲಿ 250-700 ರೂಪಾಯಿವರೆಗೂ ಟಿಕೆಟ್ ದರ ನಿಗದಿ ಮಾಡಲಾಗುತ್ತೆ. ಹೀಗಾಗಿ 250 ಕೋಟಿ ಬಜೆಟ್ನ ಇಂಡಿಯನ್2 ಚಿತ್ರಕ್ಕೂ ಈಗ ಪ್ರೇಕ್ಷಕರು ಒನ್ ಟು ಡಬಲ್ ದುಡ್ಡ ಕೊಟ್ಟು ನೋಡಬೇಕಾದ ಪರಿಸ್ಥಿತಿ.

ಇದನ್ನೂ ವೀಕ್ಷಿಸಿ:  ಯಶ್ ಕೆಜಿಎಫ್‌ಗೆ ಸೆಡ್ಡು ಹೊಡೆಯುತ್ತಾರಾ ಚಿಯಾನ್ ವಿಕ್ರಂ? ಪಾ ರಂಜಿತ್ ತಂಗಲಾನ್‌ಗೆ ಸ್ಪೂರ್ತಿಯಾಗಿದ್ದು ಕೋಲಾರ ಗಣಿ!

Video Top Stories