ಆರ್ಥಿಕ ಸಂಕಷ್ಟದಲ್ಲಿ ಖ್ಯಾತ ನಟ ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾ
ಕಮಲ್ ಹಾಸನ್, ಕೇವಲ ಕಾಲಿವುಡ್ ಅಲ್ಲ ಭಾರತೀಯ ಸಿನಿಮಾರಂಗದಲ್ಲಿಯೇ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಕಮಲ್ ಹಾಸನ್ ಅವರ ಮಾಜಿ, ಎರಡನೇ ಪತ್ನಿ ಸಾರಿಕಾ ಆರ್ಥಿಕ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸಾರಿಕಾ ಒಂದೊಂದು ರೂಪಾಯಿಗೂ ಪರದಾಡುವಂತ ಸ್ಥಿತಿ ತಲುಪಿದ್ದರಂತೆ.
ಕಮಲ್ ಹಾಸನ್, ಕೇವಲ ಕಾಲಿವುಡ್ ಅಲ್ಲ ಭಾರತೀಯ ಸಿನಿಮಾರಂಗದಲ್ಲಿಯೇ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಕಮಲ್ ಹಾಸನ್ ಕುಟುಂಬಸ್ಥರೆಲ್ಲರೂ ಚಿತ್ರರಂಗದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದು ಪ್ರಖ್ಯಾತಿಯನ್ನೂ ಪಡೆದಿದ್ದಾರೆ. ಆದ್ರೆ ಕಮಲ್ ಹಾಸನ್ ಅವರ ಮಾಜಿ, ಎರಡನೇ ಪತ್ನಿ ಸಾರಿಕಾ ಆರ್ಥಿಕ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸಾರಿಕಾ ಒಂದೊಂದು ರೂಪಾಯಿಗೂ ಪರದಾಡುವಂತ ಸ್ಥಿತಿ ತಲುಪಿದ್ದರಂತೆ. ನಟಿ ಸಾರಿಕಾ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡವ್ರು. ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದ್ರು. ನಂತರ ಶ್ರೀಮಾನ್ ಶ್ರೀಮತಿ, ಸತ್ತೇ ಪೆ ಸತ್ತಾ, ರಾಜ್ ತಿಲಕ್, ತಹಾನ್, ಮನೋರಮಾ ಸಿಕ್ಸ್ ಫೀಟ್ ಅಂಡರ್, ಭೇಜಾ ಫ್ರೈ ಮತ್ತು ಪರ್ಜಾನಿಯಾ ಮುಂತಾದ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.