Asianet Suvarna News Asianet Suvarna News

Pushpa 2: ಸಮಂತಾ ಅಲ್ಲ, ಅಲ್ಲು ಅರ್ಜುನ್‌ ಜತೆ ಮತ್ತೊಬ್ಬ ನಟಿ ಐಟಂ ಡಾನ್ಸ್!

ಪುಷ್ಪ ಪಾರ್ಟ್-2 ಚಿತ್ರೀಕರಣ ಪ್ರಾರಂಭವಾಗಿದೆ. ಪಾರ್ಟ್2ನಲ್ಲೂ ನಿರ್ದೇಶಕ ಸುಕುಮಾರ್ ಐಟಂ ಹಾಡನ್ನು ಇರಿಸಿದ್ದಾರಂತೆ. ಅಷ್ಟೆಯಲ್ಲೇ ಈಗಾಗಲೇ ಐಟಂ ಹಾಡಿಗೆ ಹೆಜ್ಜೆ ಹಾಕುವ ನಟಿಯನ್ನು ಸಹ ಆಯ್ಕೆ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಸೌತ್ ಸುಂದರಿ ಸಮಂತಾ ಹೂ ಅಂತಿಯಾ ಮಾವ.. ಹಾಡಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದರು. ಸಮಂತಾ ಡಾನ್ಸ್, ಲುಕ್, ಬೋಲ್ಡ್‌ನೆಸ್, ಲಿರಿಕ್ಸ್ ಅಭಿಮಾನಿಗಳ ಕಿಕ್ ಏರಿಸಿತ್ತು. ಅಂದಹಾಗೆ ಈ ಹಾಡಿಗಾಗಿ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅನೇಕ ಬಾಲಿವುಡ್ ಸ್ಟಾರ್‌ಗಳಿಗೆ ಆಫರ್ ಮಾಡಿದ್ದರು. ಮೊದಲು ದಿಶಾ ಪಟಾಣಿಯನ್ನು ಕೇಳಿದ್ದರು. ಆದರೆ ದಿಶಾ ಈ ಆಫರ್ ತಿರಸ್ಕರಿಸಿದರು. ಬಳಿಕ ಸಾಕಷ್ಟು ಬಾಲಿವುಡ್ ನಟಿಯರಿಗೆ ಆಫರ್ ಮಾಡಿದ್ದರು. ಆದರೆ  4 ರಿಂದ 5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ ಕಾರಣ ನಿರ್ದೇಶಕ ಸುಕುಮಾರ್ ಬಾಲಿವುಡ್ ಬಿಟ್ಟು ಸೌತ್ ಸುಂದರಿಯನ್ನೆ ಆಯ್ಕೆ ಮಾಡಲು ನಿರ್ಧರಿಸಿದರು. ಇದೀಗ ಪುಷ್ಪ ಪಾರ್ಟ್-2 ಚಿತ್ರೀಕರಣ ಪ್ರಾರಂಭವಾಗಿದೆ. ಪಾರ್ಟ್ 2ನಲ್ಲೂ ನಿರ್ದೇಶಕ ಸುಕುಮಾರನ್‌ ಐಟಂ ಹಾಡನ್ನು ಇರಿಸಿದ್ದಾರಂತೆ. ಮಾತ್ರವಲ್ಲದೇ ಈಗಾಗಲೇ ಐಟಂ ಹಾಡಿಗೆ ಹೆಜ್ಜೆ ಹಾಕುವ ನಟಿಯನ್ನು ಸಹ ಆಯ್ಕೆ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು! ಕಾಜಲ್ ಅಗರವಾಲ್ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಾಜಲ್ ಅಥವಾ ಸಿನಿಮಾತಂಡದ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ರಿವೀಲ್ ಆಗಿಲ್ಲ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment