RRR Movie: ಪ್ರೀ-ರಿಲೀಸ್ ಈವೆಂಟ್‌ಗೂ ಮುನ್ನ ನಿರ್ದೇಶಕರು ಹಾಗೂ ನಟರ ನಡುವೆ ನಡೆದಿದ್ದೇನು ಗೊತ್ತಾ?

'ಆರ್‌ಆರ್‌ಆರ್‌' ಚಿತ್ರದ ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೂ ಮುಂಚೆ ರಾಜಮೌಳಿ, ಜ್ಯೂ.ಎನ್​ಟಿಆರ್ ಹಾಗೂ ರಾಮ್​ ಚರಣ್ ಇಂದು ಕೊಠಡಿಯಲ್ಲಿ ಸೇರಿಕೊಂಡು ಏನೆಲ್ಲಾ ತರ್ಲೆ-ತಮಾಷೆ ಮಾಡಿದ್ದಾರೆ ಗೊತ್ತಾ?

Share this Video
  • FB
  • Linkdin
  • Whatsapp

ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ಜ್ಯೂ.ಎನ್​ಟಿಆರ್ (Jr NTR) ಮತ್ತು ರಾಮ್​ ಚರಣ್ (Ram Charan)​ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (RRR) (ರೌದ್ರ-ರಣ-ರುಧಿರ) ಸಿನಿಮಾ ಮಾರ್ಚ್ 25ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ವಿ.ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆಯನ್ನು ಚಿತ್ರ ಒಳಗೊಂಡಿದೆ. 

ಮೊದಲ ದಿನವೇ RRR ಸಿನಿಮಾ ನೋಡಲು 75 ಟಿಕೆಟ್ ಖರೀದಿಸಿದ ಜೂ.NTR ಅಭಿಮಾನಿ!

ಈ ಮಧ್ಯೆ 'ಆರ್‌ಆರ್‌ಆರ್‌' ಚಿತ್ರದ ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮ ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಅಗಲಗುರ್ಕಿ ಸಮೀಪ ಚಿಕ್ಕನಹಳ್ಳಿ ಕ್ರಾಸ್‌ನಲ್ಲಿ ಬರೋಬ್ಬರಿ 70 ಎಕರೆ ಪ್ರದೇಶದಲ್ಲಿ ಲಕ್ಷಾಂತರ ಕನರ ನಡುವೆ ಅದ್ಧೂರಿಯಾಗಿ ನಡೆದಿದೆ. ಆದರೆ ಈ ಕಾರ್ಯಕ್ರಮಕ್ಕೂ ಮುಂಚೆ ರಾಜಮೌಳಿ, ಜ್ಯೂ.ಎನ್​ಟಿಆರ್ ಹಾಗೂ ರಾಮ್​ ಚರಣ್ ಕೊಠಡಿಯಲ್ಲಿ ಸೇರಿಕೊಂಡು ಏನೆಲ್ಲಾ ತರ್ಲೆ-ತಮಾಷೆ ಮಾಡಿದ್ದಾರೆ ಗೊತ್ತಾ? ಹಾಗಿದ್ದರೆ ಮಿಸ್ ಮಾಡದೇ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video