ಫ್ಯಾನ್ಸ್​ಗೆ ಖುಷಿ ಕೊಟ್ರಾ ದೇವರ?: ದ್ವಿಪಾತ್ರದಲ್ಲಿ ಜೂ.ಎನ್‌ಟಿಆರ್.. ಕಿಕ್​ ಕೊಟ್ಟ ಜಾನ್ವಿ!

ಒಂದೊಳ್ಳೆ ಮೆಸೇಜ್ ಜೊತೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ 'ದೇವರ' ಪ್ರಪಂಚವನ್ನು ಕಟ್ಟಿಕೊಡಲಾಗಿದೆ. ಯಾಕಂದ್ರೆ ಬಹಳ ವರ್ಷಗಳ ಬಳಿಕ ಸೋಲೊ ಹೀರೊ ಆಗಿ ತಾರಕ್ ನಟಿಸಿರುವ ಸಿನಿಮಾ ಇದು. ಸೋಲೊ ಹೀರೊ ಆಗಿದ್ರೂ ಡಬಲ್ ರೋಲ್ನಲ್ಲಿ ಡಬಲ್ ಧಮಾಕ ಮಾಡಿದ್ದಾರೆ. 

First Published Sep 29, 2024, 5:16 PM IST | Last Updated Sep 29, 2024, 5:17 PM IST

ಜ್ಯೂನಿಯರ್​​ ಎನ್​ಟಿಅರ್​​ ಫ್ಯಾನ್ಸ್​ಗೆ ಫೆಸ್ಟಿವೆಲ್.. ಅದಕ್ಕೆ ಕಾರಣ ದೇವರ ಸಿನಿಮಾ. ಆದ್ರೆ ಆ ಸೆಲೆಬ್ರೇಷನ್ ಅತಿಯಾದ್ರೆ ಏನಾಗಬಹುದು ಅನ್ನೋದಕ್ಕೆ ದೇವಾರ ಸಿನಿಮಾ ಸಾಕ್ಷಿಯಾಗಿದೆ. ಯಾಕಂದ್ರೆ ಸಿನಿಮಾ ರಿಲೀಸ್ ಆಯ್ತು ಅಂತ ಸಂಭ್ರಮಿಸೋಕೆ ಹೋಗಿ ಆ ಸಿನಿಮಾದ ಹೀರೋನಾ ಕಟೌಟ್​ಗೆ ಬೆಂಕಿ ಇಟ್ಟಿದ್ದಾರೆ.. ಹಾಗಾದ್ರೆ ಏನಿದು ದೇವರದ ಬೆಂಕಿ ಕಥೆ..? ಆರ್​​ಆರ್​​ಆರ್​ ಬಳಿಕ ಜ್ಯೂ,ಎನ್​ಟಿಆರ್​​ ಮತ್ತೊಮ್ಮೆ ತೆರೆ ಮೇಲೆ ಬಂದಿದ್ದಾರೆ. ಈ ಭಾರಿ ಸಮುದ್ರ ಮಕ್ಕಳ ಕತೆ ಹೊತ್ತು ತಾರಕ್​​ ತೆರೆ ಮೇಲೆ ವಿಜೃಂಭಿಸಿದ್ದಾರೆ. ಕೊರಟಾಲ ಶಿವ ನಿರ್ದೇಶನದ 'ದೇವರ' ಪ್ರದರ್ಶನ ಮಧ್ಯರಾತ್ರಿಯಿಂದಲೇ ನಡೆಯುತ್ತಿದೆ. ಜ್ಯೂ. ಎನ್ಟಿಆರ್ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 

ಒಂದೊಳ್ಳೆ ಮೆಸೇಜ್ ಜೊತೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ 'ದೇವರ' ಪ್ರಪಂಚವನ್ನು ಕಟ್ಟಿಕೊಡಲಾಗಿದೆ. ಯಾಕಂದ್ರೆ ಬಹಳ ವರ್ಷಗಳ ಬಳಿಕ ಸೋಲೊ ಹೀರೊ ಆಗಿ ತಾರಕ್ ನಟಿಸಿರುವ ಸಿನಿಮಾ ಇದು. ಸೋಲೊ ಹೀರೊ ಆಗಿದ್ರೂ ಡಬಲ್ ರೋಲ್ನಲ್ಲಿ ಡಬಲ್ ಧಮಾಕ ಮಾಡಿದ್ದಾರೆ. ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದ ನಿರ್ದೇಶಕ ಕೊರಟಾಲ ಶಿವ ಒಂದು ಮಟ್ಟಕ್ಕೆ ಗೆದ್ದಿದ್ದಾರೆ. ಸೈಫ್ ಅಲಿಖಾನ್, ಪ್ರಕಾಶ್ರಾಜ್, ಶ್ರೀಕಾಂತ್ರಂಗ ಖದರ್​ ತೋರಿಸಿದ್ರೆ, ಜಾನ್ವಿ ಕಪೂರ್ ಗ್ಲಾಮರ್ ಸಖತ್​ ಆಗಿ ವರ್ಕ್ ಆಗಿದೆ. ಆ ಕಡೆ ಕರ್ನಾಟಕದಲ್ಲಿ ದೇವಾರ ಬೆಂಕಿ ಹೊತ್ತಿ ಉರಿದಿದೆ. ಕರ್ನಾಟಕದಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ದೇವಾರ ಪ್ರದರ್ಶನ ಶುರುಮಾಡಿದೆ. 

ಕರ್ನಾಟಕದಲ್ಲಿ ಈ ದೇವಾರ ಸೆಲೆಬ್ರೇಷನ್ ಹೇಗಿತ್ತು ಅಂದ್ರೆ ಜ್ಯೂನಿಯರ್ ಎನ್​ಟಿಆರ್ ಕಟೌಟ್​ಗೆ ಬೆಂಕಿ ಬೀಳೋ ಮಟ್ಟಕ್ಕಿತ್ತು. ಬೆಂಗಳೂರಿನ ಚಿತ್ರಮಂದಿರ ಒಂದರಲ್ಲಿ ಬೆಳಗ್ಗೆ 4 ಗಂಟೆ ಶೋಗೆ ಬಂದಿದ್ದ ಫ್ಯಾನ್ಸ್​ಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಅಭಿಮಾನಿಯೊಬ್ಬ ಪಟಾಕಿ ಸರ ಹಿಡಿದು ಹುಚ್ಚಾಟ ತೋರಿದ್ದ. ಆಗ ಜ್ಯೂ,ಎನ್​ಟಿಆರ್ ಕಟೌಟ್​ಗೆ ಬೆಂಕಿ ತಗುಲಿದ್ದು ಕೆಲ ಕ್ಷಣಗಳ ಕಾಲ ಆ ಕಟೌಟ್ ಹೊತ್ತಿ ಉರಿದಿದೆ. ಬಳಿಕ ಎಲ್ಲರು ಸೇರಿ ಬೆಂಕಿ ನಂದಿಸಿದ್ದಾರೆ. ಅಷ್ಟೆ ಅಲ್ಲ ಆಂಧ್ರದಲ್ಲೂ ಇಂತದ್ದೇ ಘಟನೆ ಆಗಿದೆ. ಆಂಧ್ರದ ಚಿತ್ರಮಂದಿರ ಒಂದರಲ್ಲಿ ತಾರಕ್​ ಕಟೌಟ್ ಪುರ್ತಿ ಬೆಂಕಿಗಾಹುತಿ ಆಗಿದೆ. 

ದೇವರ ಸಿನಿಮಾ ಬಗ್ಗೆ ಮಿಕ್ಸ್​ ರಿವ್ಯೂ ಬಂದಿದೆ. ಸಿನಿಮಾದ ಕಥೆ ಚನ್ನಾಗಿದ್ರೂ ಅದನ್ನ ಎರಡು ಪಾರ್ಟ್​ನಲ್ಲಿ ಮಾಡಲು ಹೋಗಿ ನಿರ್ದೇಶಕ ಕೊರಟಾಲ ಶಿವ ಎಡವಿದ್ದಾರೆ ಅನ್ನೋ ಟಾಕ್​ ಶುರುವಾಗಿದೆ. ಆದ್ರೆ ಕರ್ನಾಟಕದಲ್ಲಿ 400 ಚಿತ್ರಮಂದಿರಗಳಲ್ಲಿ ಬಂದಿರೋ ದೇವಾರವನ್ನ ಕನ್ನಡಿಗರು ಹೊತ್ತು ಮೆರೆಸುತ್ತಿದ್ದಾರೆ. 500 ಟಿಕೆಟ್ ರೇಟ್ ಇದ್ರೂ ದೇವಾರ ಕರ್ನಾಟಕದಲ್ಲಿ ಹೌಸ್​ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ತೆಲುಗು ಸ್ಟಾರ್ ಜ್ಯೂ,ಎನ್​ಟಿಆರ್ ಕರ್ನಾಟಕದಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದಾರೆ.