Asianet Suvarna News Asianet Suvarna News

ರಶ್ಮಿಕಾ-ವಿಜಯ್ ದೇವರಕೊಂಡ ಲವ್ ಬ್ರೇಕಪ್ ಆಗಿ 2ವರ್ಷ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಯಾವುದು ಸರಿಯಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಕಿರಿಕ್ ಪಾರ್ಟಿ ನಟಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಇಬ್ಬರ ಆಪ್ತರಾಗಿರುವ ವಿಡಿಯೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆದರೀಗ ಇಬ್ಬರ ನಡುವೆ ಪ್ರೀತಿ, ಪ್ರೇಮ ಎನ್ನುವ ಯಾವುದೇ ಭಾವನೆ ಇಲ್ಲ ಕೇವಲ ಸ್ನೇಹಿತರಾಗಿದ್ದಾರೆ ಅಷ್ಟೆ ಎನ್ನುವ ಮಾತು ಕೇಳಿಬರುತ್ತಿದೆ. 

Aug 5, 2022, 3:21 PM IST

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಯಾವುದು ಸರಿಯಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಕಿರಿಕ್ ಪಾರ್ಟಿ ನಟಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಇಬ್ಬರ ಆಪ್ತರಾಗಿರುವ ವಿಡಿಯೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆದರೀಗ ಇಬ್ಬರ ನಡುವೆ ಪ್ರೀತಿ, ಪ್ರೇಮ ಎನ್ನುವ ಯಾವುದೇ ಭಾವನೆ ಇಲ್ಲ ಕೇವಲ ಸ್ನೇಹಿತರಾಗಿದ್ದಾರೆ ಅಷ್ಟೆ ಎನ್ನುವ ಮಾತು ಕೇಳಿಬರುತ್ತಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾಗಳು ಸೌತ್ ನಲ್ಲಿ ಸಂಚಲನ ಸೃಷ್ಟಿಮಾಡಿದ್ದ ಸಿನಿಮಾಗಳಾಗಿವೆ. ಈ ಸಿನಿಮಾ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರ ನಡುವೆ ಬ್ರೇಕಪ್ ಆಗಿದ್ದು ಸ್ನೇಹಿತರಾಗಿ ಮುಂದುವರೆಯೋಣ ಎನ್ನುವ ಮಾತುಕತೆಯಾಗಿದೆಯಂತೆ. ಸಿಕ್ಕಾಪಟ್ಟೆ ಬ್ಯುಸಿ ಇರುವ ಈ ಸ್ಟಾರ್ಸ್ ಸದ್ಯ ಫ್ರಂಡ್ಸ್ ಅಷ್ಟೆ ಎನ್ನಲಾಗುತ್ತಿದೆ.