Rashmika Mandanna: ಮುಂದಿನ ಜನ್ಮದಲ್ಲಿ ಹುಡುಗನಾಗಿ ಹುಟ್ಟಬೇಕು ಎಂದ ಶ್ರೀವಲ್ಲಿ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಂದಿನ ಜನ್ಮದಲ್ಲಿ ಹುಡುಗನಾಗಿ ಹುಟ್ಟಬೇಕು ಅಂದುಕೊಂಡಿರುವೆ. ಅದರಲ್ಲೂ 'ಪುಷ್ಪ' ಮತ್ತು 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ಚಿತ್ರೀಕರಣ ಮಾಡಿದ ಮೇಲೆ ಹೀಗೆ ಅನಿಸಿದೆ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸುಮಾರು ಒಂದು ತಿಂಗಳಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. 'ಪುಷ್ಪ' (Pushpa) ಸಿನಿಮಾ ಹಿಟ್ ಆದ ನಂತರ ರಶ್ಮಿಕಾ ಅಭಿನಯದ 'ಆಡುವಾಳ್ಳು ಮೀಕು ಜೋಹಾರ್ಲು' (Adavallu Meeku Joharlu) ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಮೋಷನ್ ವೇಳೆ ರಶ್ಮಿಕಾ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಹೌದು! 'ನಾನು ಮುಂದಿನ ಜನ್ಮದಲ್ಲಿ ಹುಡುಗನಾಗಿ ಹುಟ್ಟಬೇಕು ಅಂದುಕೊಂಡಿರುವೆ. ಅದರಲ್ಲೂ 'ಪುಷ್ಪ' ಮತ್ತು 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ಚಿತ್ರೀಕರಣ ಮಾಡಿದ ಮೇಲೆ ಹೀಗೆ ಅನಿಸಿದೆ. ಈ ಎರಡೂ ಚಿತ್ರಗಳಿಗೆ ಡಿಫರೆಂಟ್ ಅಗಿರುವ ಕಾಸ್ಟ್ಯೂಮ್‌ಗಳನ್ನು ಬದಲಾಯಿಸಿ ಸಾಕಾಗಿದೆ. 

ಪುಷ್ಪ 2 ಸಿನಿಮಾ ಮಾಡೋಕೆ 2.5 ಕೋಟಿ ರೂ ಬೇಡಿಕೆ ಇಟ್ಟ ರಶ್ಮಿಕಾ ಮಂದಣ್ಣ?

ಹುಡುಗರಿಗೆ ಇಷ್ಟೆಲ್ಲಾ ಕೆಲಸ ಇಲ್ಲ ಅವರ ಜೀವನ ತುಂಬಾನೇ ಸುಲಭ. ಇಷ್ಟೊಂದು ಬದಲಾವಣೆ ಇರುವುದಿಲ್ಲ' ಎಂದು ರಶ್ಮಿಕಾ ಹೇಳಿದ್ದಾರೆ. ಮಾತ್ರವಲ್ಲದೇ 'ಆಡುವಾಳ್ಳು ಮೀಕು ಜೋಹಾರ್ಲು ಸಿನಿಮಾವನ್ನು ಎಲ್ಲಾ ವಯಸ್ಸಿನವರು ನೋಡಬೇಕು. ಕೆಲವೊಂದು ನೈಜ ದೃಶಗಳನ್ನು ಸಿನಿಮಾದಲ್ಲಿ ಬಳಸಲಾಗಿದೆ. ತುಂಬಾ ಕಾಮಿಡಿ ಮತ್ತು ಎಮೋಷನ್‌ ಮತ್ತು ರಿಯಲ್‌ ಘಟನೆಗಳನ್ನು ಜನರ ಮುಂದೆ ತಂದಿಡುವ ಪ್ರಯತ್ನವಾಗಿದೆ. ಎಲ್ಲರೂ ಫ್ಯಾಮಿಲಿ ಕರೆದುಕೊಂಡು ಬನ್ನಿ' ಎಂದು ರಶ್ಮಿಕಾ ವೇದಿಕೆ ಮೇಲೆ ಮಾತನಾಡಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video