ಹನಿಮೂನ್ ಇನ್ ಶಿಲ್ಲಾಂಗ್: ಬಾಲಿವುಡ್​ನಲ್ಲಿ ಸಿನಿಮಾ ಆಗ್ತಿದೆ ಕ್ರೈಂ ಕಹಾನಿ!

ಪತ್ನಿಯೇ ತನ್ನ ಪ್ರಿಯತಮನ ಜೊತೆ ಸೇರಿ ಪತಿಯ ಮರ್ಡರ್​​ ಮಾಡಿಸಿದ್ದ ಈ ಕೇಸ್ ಈಗ ಸಿನಿಮಾ ಆಗ್ತಾ ಇದೆ. ಈ ಕಥೆಯನ್ನ ಬಾಲಿವುಡ್​​ ಮಂದಿ ಹನಿಮೂನ್ ಇನ್ ಶಿಲ್ಲಾಂಗ್ ಹೆಸರಲ್ಲಿ ಸಿನಿಮಾ ಮಾಡ್ತಾ ಇದ್ದಾರೆ.

Share this Video
  • FB
  • Linkdin
  • Whatsapp

ಕೆಲ ದಿನಗಳ ಹಿಂದೆ ಮೇಘಾಲಯದ ಶಿಲ್ಲಾಂಗ್​​ನಲ್ಲಿ ನಡೆದ ಹನಿಮೂನ್ ಮರ್ಡರ್ ಕೇಸ್ ದೇಶಾದ್ಯಂತ ಸದ್ದು ಮಾಡಿತ್ತು. ಪತ್ನಿಯೇ ತನ್ನ ಪ್ರಿಯತಮನ ಜೊತೆ ಸೇರಿ ಪತಿಯ ಮರ್ಡರ್​​ ಮಾಡಿಸಿದ್ದ ಈ ಕೇಸ್ ಈಗ ಸಿನಿಮಾ ಆಗ್ತಾ ಇದೆ. ಈ ಕಥೆಯನ್ನ ಬಾಲಿವುಡ್​​ ಮಂದಿ ಹನಿಮೂನ್ ಇನ್ ಶಿಲ್ಲಾಂಗ್ ಹೆಸರಲ್ಲಿ ಸಿನಿಮಾ ಮಾಡ್ತಾ ಇದ್ದಾರೆ. ಕಳೆದ ತಿಂಗಳು ಮೇಘಾಲಯದ ಶಿಲ್ಲಾಂಗ್​ನಲ್ಲಿ ನಡೆದ ಮರ್ಡರ್ ಕೇಸ್ ಭಾರಿ ಸದ್ದು ಸುದ್ದಿ ಮಾಡಿತ್ತು. ಅಸಲಿಗೆ ಮೇಘಾಲಯಕ್ಕೆ ಹನಿಮೂನ್​ಗೆ ಅಂತ ಬಂದಿದ್ದ ಇಂದೋರ್ ಮೂಲದ ನವದಂಪತಿ ಕಣ್ಮರೆ ಆಗಿದ್ರು. ಇದೊಂದು ಮಿಸ್ಸಿಂಗ್ ಕೇಸ್ ಅಂದುಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಬಳಿಕ ರೋಚಕ ವಿವರಗಳು ಸಿಕ್ಕಿದ್ವು. ಪತ್ನಿಯೇ ಹನಿಮೂನ್​ ಮೂಡ್​ನಲ್ಲಿದ್ದ ಪತಿಯನ್ನ ಪ್ರಿಯಕರನಿಗಾಗಿ ಕೊಲೆ ಮಾಡಿಸಿದ್ಳು.

ಎಲ್ಲರನ್ನೂ ಬೆಚ್ಚಿಬೀಳಿಸಿದ್ದ ಈ ಕ್ರೈಂ ಕಹಾನಿಯನ್ನ ಆಧರಿಸಿ ಬಾಲಿವುಡ್ ಮಂದಿ ಸಿನಿಮಾ ಮಾಡ್ತಾ ಇದ್ದಾರೆ. ಹನಿಮೂನ್ ಇನ್ ಶಿಲ್ಲಾಂಗ್ ಅಂತ ಟೈಟಲ್ ಕೂಡ ಫಿಕ್ಸ್ ಮಾಡಿದ್ದಾರೆ. ಬಾಲಿವುಡ್​ ನಿರ್ದೇಶಕ ಎಸ್​ಪಿ ನಿಂಬಾವತ್ ‘ಹನಿಮೂನ್ ಇನ್ ಶಿಲ್ಲಾಂಗ್’ ನ ಪೋಸ್ಟರ್​ ರಿಲೀಸ್ ಮಾಡಿದ್ದು, ಇಂದೋರ್ ಮತ್ತು ಮೇಘಾಲಯದಲ್ಲಿ ಶೂಟಿಂಗ್ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಅಸಲಿಗೆ ಈ ಕೇಸ್ ನೋಡಿದವರು 1993ರಲ್ಲಿ ಕನ್ನಡದಲ್ಲಿ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾವನ್ನ ನೆನಪಿಸಿಕೊಂಡಿದ್ರು. ಈ ಸಿನಿಮಾದಲ್ಲಿ ನಾಯಕ ನಾಯಕಿನ್ನ ಮಧುಚಂದ್ರಕೆ ಕರೆದೊಯ್ದು ಕೊಲೆ ಮಾಡ್ತಾನೆ.

ಆದ್ರೆ ಮೇಘಾಲಯ ಕೇಸ್​ನಲ್ಲಿ ಪತ್ನಿಯೇ ಪತಿಯ ಕೊಲೆ ಮಾಡಿಸಿದ್ದಾಳೆ. ಅಷ್ಟು ಬಿಟ್ರೆ ಎಲ್ಲಾ ಸೇಮ್ ಟು ಟೇಮ್. ಇನ್ನೂ ಮೇಘಾಲಯ ಮರ್ಡರ್ ಕೇಸ್​​ಗೆ ಹೋಲಿಕೆಯಾಗುವಂಥಾ ಮತ್ತೊಂದು ಕನ್ನಡ ಸಿನಿಮಾ ಇದೆ. ಅದುವೇ ರಿಂಗ್ ರೋಡ್ ಶುಭಾ. 2015ರಲ್ಲಿ ಬಂದ ಈ ಸಿನಿಮಾ ಕೂಡ ಒಂದು ನೈಜ ಕಥೆಯನ್ನ ಆಧರಿಸಿ ಸಿದ್ದವಾಗಿತ್ತು. ಶುಭಾ ಅನ್ನೋ ಯುವತಿ ಎಂಗೇಜ್ ಮೆಂಟ್ ಅಗಿದ್ದ ತನ್ನ ಭಾವಿ ಪತಿಯನ್ನ ಗೆಳೆಯನಿಗೋಸ್ಕರ ಕೊಲೆ ಮಾಡಿಸಿದ್ದಳು. ಇದೀಗ ಮೇಘಾಲಯ ಮರ್ಡರ್ ಕೇಸ್​ ಸ್ಪೂರ್ತಿಯಿಂದಲೇ ಬಾಲಿವುಡ್ ಮೂವಿಯೊಂದು ಬರ್ತಾ ಇದೆ. ಜನರನ್ನ ಬೆಚ್ಚಿಬೀಳಿಸಿದ ಕ್ರೈಂ ಕಹಾನಿ ಸಿನಿಮಾ ರೂಪದಲ್ಲಿ ಬಂದು ನೋಡುಗರನ್ನ ಬೆಚ್ಚಿಬೀಳಿಸೋ ತಯಾರಿಯಲ್ಲಿದೆ.

Related Video