ದಾವಣಗೆರೆಯಲ್ಲಿ 'ಹೆಡ್ ಬುಷ್' ಹವಾ: ಕಾರ್ಯಕ್ರಮಕ್ಕೆ ರಂಗು ತಂದ ತಾರಾ ಮಣಿಗಳು!

ಡಾಲಿ ಧನಂಜಯ್ ಅಭಿನಯದ ‘ಹೆಡ್​ ಬುಷ್​’ ಸಿನಿಮಾ ಅ. 21ರಂದು ರಿಲೀಸ್​ ಆಗಲಿದ್ದು, ಆ ಪ್ರಯುಕ್ತ ದಾವಣಗೆರೆಯಲ್ಲಿ ಭಾನುವಾರ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್​ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿ, ಚಿತ್ರತಂಡಕ್ಕೆ​ ಶುಭ ಕೋರಿದ್ದಾರೆ.

First Published Oct 17, 2022, 5:26 PM IST | Last Updated Oct 17, 2022, 5:26 PM IST

ಬೆಣ್ಣೆನಗರಿ ದಾವಣಗೆರೆಗೆ ಸಿನಿಮಾ ತಂಡ ಬಸ್'ನಲ್ಲಿ ಪ್ರಯಾಣ ಮಾಡಿದೆ. ಇನ್ನು ಸಿನಿಮಾದ ಪ್ರೀ- ರಿಲೀಸ್ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನಟಿ  ಪಾಯಲ್ ರಜಪುತ್ ಮೆರುಗು ತಂದಿದ್ದಾರೆ. ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ಲೂಸ್ ಮಾದ ಯೋಗಿ ಹಾಗೂ ರಘು ಮುಖರ್ಜಿ ಸೇರಿ ಅನೇಕರು ಇದ್ದರು. ಶೂನ್ಯ ನಿರ್ದೇಶನದ ಹೆಡ್ ಬುಷ್'ಗೆ, ಡಾಲಿ ಧನಂಜಯ್ ಬಂಡವಾಳ ಹೂಡಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ