ನಾನು ಬಿಜೆಪಿ, ಆರ್.ಎಸ್.ಎಸ್ ವಿರೋಧಿ ಅಲ್ಲ: ಡಾಲಿ ಧನಂಜಯ್
ನಾನು ಲೆಫ್ಟಿಸ್ಟ್ ಅಲ್ಲ, ನಾನೊಬ್ಬ ಕಲಾವಿದ. ನಾನು ಬಿಜೆಪಿ, ಆರ್.ಎಸ್.ಎಸ್ ಯಾರ ವಿರೋಧಿಯೂ ಅಲ್ಲ ಎಂದು ನಟ ಡಾಲಿ ಧನಂಜಯ್ ತಿಳಿಸಿದ್ದಾರೆ.
ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಮಾಡಲಾಗಿದೆ ಎಂಬ ವಿವಾದ ಮೆತ್ತಿಕೊಂಡಿದೆ. ಈ ನಡುವೆ ಡಾಲಿ ಧನಂಜಯ್ '60 ಸೆಕೆಂಡ್ ವಿತ್ ಭಾವನಾ' ಕಾರ್ಯಕ್ರಮದಲ್ಲಿ ಡಾಲಿ ಮಾತನಾಡಿದ್ದಾರೆ. ಅಗ್ನಿ ಶ್ರೀಧರ್ ಜೊತೆ ಸಿನಿಮಾ ಮಾಡಬಾರದು ಅಂತಾ ಅನಿಸಿರೋದು ಇದೆಯಾ ಎಂಬ ಪ್ರಶ್ನೆಗೆ, ಅಗ್ನಿ ಶ್ರೀಧರ್ ಒಬ್ಬ ರೈಟರ್ ಆಗಿ ನನಗೆ ತುಂಬಾ ಇಷ್ಟ ಎಂದು ಧನಂಜಯ್ ಹೇಳಿದ್ದಾರೆ. ಮತ್ತೆ ಚಿತ್ರ ನಿರ್ಮಾಣಗಳನ್ನು ಮುಂದುವರೆಸುತ್ತಿರಾ ಎಂದು ಕೇಳಿದ್ದಕ್ಕೆ, ಮತ್ತೆ ಚಿತ್ರ ನಿರ್ಮಾಣಗಳನ್ನು ಮುಂದುವರೆಸುತ್ತೇನೆ. ಆದರೆ ನನ್ನ ಸಿನಿಮಾಗಳಿಗಿಂತ ಕಟೆಂಟ್ ಓರಿಯಂಟೆಡ್ ಸಿನಿಮಾಗಳು ಮತ್ತು ಹೊಸ ಪ್ರತಿಭೆಗಳ ಜೊತೆ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ. ಹಾಗೂ ಸ್ಯಾಂಡಲ್‌ವುಡ್ ಯಾವಾಗಲೂ ನನ್ನ ಜೊತೆ ನಿಂತಿದೆ ಎಂದಿದ್ದಾರೆ.
ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಕಣ್ಣೂರು ಮಠದ ಸ್ವಾಮಿ ಬಂಧನ