Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನ ಗೂಗ್ಲಿ ಬ್ಯೂಟಿಗೆ ಮದುವೆ ಭಾಗ್ಯ: ಪ್ರೀತಿಸಿದ ಹುಡುಗನನ್ನ ಕೈ ಹಿಡಿಯುತ್ತಿದ್ದಾರೆ ಕೃತಿ!

ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಸಿನಿಮಾ ಕೊಟ್ಟು ಚಂದನವನ ಸಿನಿ ಪ್ರೇಕ್ಷಕರ ಮನಸ್ಸು ಕದ್ಡಿದ್ದ ಬ್ಯೂಟಿಕ್ವೀನ್ ಕೃತಿ ಕರಬಂಧ. ಕೃತಿ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಈ ಚೆಲುವೆಯ ಮದುವೆ ಸುದ್ದಿ ಹೊರಬಿದ್ದಿದೆ.

Sep 21, 2022, 8:22 PM IST

ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಸಿನಿಮಾ ಕೊಟ್ಟು ಚಂದನವನ ಸಿನಿ ಪ್ರೇಕ್ಷಕರ ಮನಸ್ಸು ಕದ್ಡಿದ್ದ ಬ್ಯೂಟಿಕ್ವೀನ್ ಕೃತಿ ಕರಬಂಧ. ಕೃತಿ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಈ ಚೆಲುವೆಯ ಮದುವೆ ಸುದ್ದಿ ಹೊರಬಿದ್ದಿದೆ. ಈ ಗೂಗ್ಲಿ ಸುಂದರಿ ಕೃತಿ ಕರಬಂಧ ಬಾಲಿವುಡ್‌ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಮದುವೆ ಆಗುತ್ತಿದ್ದಾರಂತೆ. ಪುಲ್ಕಿತ್ ಸಾಮ್ರಾಟ್ ಕೃತಿ ಕರಬಂಧ ಪ್ರೀತಿಯಲ್ಲಿ ಬಿದ್ದಿದ್ದು, ಕಳೆದ 4 ವರ್ಷಗಳಿಂದ ಕೃತಿ ಪುಲ್ಕಿತ್ ಡೇಟಿಂಗ್‌ನಲ್ಲಿದ್ದರು. ಇದೀಗ ಈ ಲವ್ ಬರ್ಡ್ಸ್ ಹಸೆಮಣೆ ಏರಲಿದ್ದಾರಂತೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಕೃತಿ ಮತ್ತು ಪುಲ್ಕಿತ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ ಈ ಜೋಡಿ ಮದುವೆ ಬಗ್ಗೆ ಇನ್ನು ಅಧಿಕೃತವಾಗಿ ತಿಳಿಸಿಲ್ಲ. ಚಿರಂಜೀವಿ ಸರ್ಜಾ ನಟನೆಯ ಚಿರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಕೃತಿ ಕರಬಂಧ ಬಳಿಕ ಗೂಗ್ಲಿ, ಪ್ರೇಮ್‌ ಅಡ್ಡಾ, ಸೂಪರ್ ರಂಗಾ, ಬೆಳ್ಳಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment