ವಿದೇಶದಲ್ಲಿ ಭಾರತದ ಊಬರ್ ಡ್ರೈವರ್, ಮಾಸ್ಕ್ ತೆಗೆದು ಸಪ್ರೈಜ್ ಕೊಟ್ಟ ಅನುಪಮ್ ಖೇರ್!
ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದ ಅನುಪಮ್ ಖೇರ್ ಪ್ರಯಾಣಕ್ಕಾಗಿ ಊಬರ್ ಬುಕ್ ಮಾಡಿದ್ದು, ಈ ವೇಳೆ ಭಾರತದ ಅಮೃತ್‌ಸರ ಮೂಲದ ಚಾಲಕನಿಗೆ ಅಚ್ಚರಿ ನೀಡಿದ್ದಾರೆ
ನ್ಯೂಯಾರ್ಕ್(ಸೆ.15) ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದ ಅನುಪಮ್ ಖೇರ್ ಪ್ರಯಾಣಕ್ಕಾಗಿ ಊಬರ್ ಬುಕ್ ಮಾಡಿದ್ದು, ಈ ವೇಳೆ ಭಾರತದ ಅಮೃತ್‌ಸರ ಮೂಲದ ಚಾಲಕನಿಗೆ ಅಚ್ಚರಿ ನೀಡಿದ್ದಾರೆ.
ಹೌದು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಬಾಲಿವುಡ್ ನಟ ಅನುಪಪಮ್ ಖೇರ್, ಊಬರ್ ಚಾಲಕನ ಜೊತೆಗಿನ ಸಂಭಾಷಣೆಯ ವಿವರ ನೀಡಿದ್ದಾರೆ.,
ಇನ್ನು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ತನ್ನ ನೆಚ್ಚಿನ ನಟ ಅನುಪಮ್ ಖೇರ್ ಎಂದು ತಿಳಿದ ಡ್ರೈವರ್ ಕೂಡಾ ಖುಷಿಒಪಟ್ಟಿದ್ದಾರೆ.