Asianet Suvarna News Asianet Suvarna News

Allu Arjun ವರದಕ್ಷಿಣೆ ಪಡೆದ್ರಾ? ಹೆಲಿಕಾಪ್ಟರ್‌ ಕೂಡಾ?: ಅಲ್ಲು ಬಗ್ಗೆ ಮಾವ ಹೇಳಿದ್ದೇನು?

ಟಾಲಿವುಡ್‌ನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ‘ಪುಷ್ಪ-2’ ಸಿನಿಮಾ ತಯಾರಿಯಲ್ಲಿದ್ದಾರೆ. ಈ ನಡುವೆ ಅಲ್ಲು ಅರ್ಜುನ್ ಅವರ ಮಾವ ಚಂದ್ರಶೇಖರ್ ತಮ್ಮ ಅಳಿಯನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 

ಟಾಲಿವುಡ್‌ನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ‘ಪುಷ್ಪ-2’ ಸಿನಿಮಾ ತಯಾರಿಯಲ್ಲಿದ್ದಾರೆ. ಅಭಿಮಾನಿಗಳೂ ಸಹ ಅಲ್ಲು ಅರ್ಜುನ್ ಹೋದಲ್ಲಿ ಬಂದಲ್ಲಿ ಅದೇ ಪ್ರಶ್ನೆ ಕೇಳುತ್ತಿದ್ದಾರೆ,. ಪುಷ್ಪ 2 ಸಿನಿಮಾ ಯಾವಾಗ? ಅಂತ. ಈ ನಡುವೆ ಅಲ್ಲು ಅರ್ಜುನ್ ಅವರ ಮಾವ ಚಂದ್ರಶೇಖರ್ ತಮ್ಮ ಅಳಿಯನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹೌದು! ತಮ್ಮ ಮಗಳು ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರ್ಜುನ್ ಪ್ರೀತಿ, ಸಂಸಾರದ ಬಗ್ಗೆ ಹೇಳಿದ್ದಾರೆ. ಮುಖ್ಯವಾಗಿ ಮದುವೆ ವೇಳೆ ಅಲ್ಲು ಅರ್ಜುನ್ ವರದಕ್ಷಿಣೆ ಪಡೆದಿದ್ದರಾ? ಹೆಲಿಕಾಪ್ಟರ್‌ ಕೂಡಾನಾ? ಅಂತ. 

ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್: ಕೆಜಿಎಫ್ 2ನಿಂದ ಪುಷ್ಪ 2 ಚಿತ್ರಕ್ಕೆ ಸಿಕ್ತು ಬಂಪರ್ ಆಫರ್!

ಆದರೆ ಚಂದ್ರಶೇಖರ್ ಇಲ್ಲ ಎಂದಿದ್ದಾರೆ. ಅಲ್ಲು ಅರ್ಜುನ್ ಯಾವುದೇ ವರದಕ್ಷಿಣೆ ಪಡೆದಿಲ್ಲ. ಅಲ್ಲು ಕುಟುಂಬ ವರದಕ್ಷಿಣೆ ವಿರುದ್ಧವಾಗಿದೆ. ಅವರು ಅವರದ್ದೇ ಆದ ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ. ನಾವು ಅವರಿಗೆ ಕೊಡುವುದು ದೊಡ್ಡ ವಿಷಯ ಎಂದು ಹೇಳಿದ್ದಾರೆ. ಇನ್ನು ಅಲ್ಲು ಅರ್ಜುನ್ ಮಾವ ಚಂದ್ರಶೇಖರ್ ಅವರ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ಅಲ್ಲು ಅರ್ಜುನ್‌ ಬಗ್ಗೆ ಮಾವ ಹೇಳಿದ್ದಕ್ಕೆ ಮೆಚ್ಚುಗೆಯ ಕಾಮೆಂಟ್ ಹರಿದು ಬರುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies