ರಾಜ್‌ಕುಮಾರ್‌ ಗೂ ರಾಜಕೀಯಕ್ಕೂ ಎಣ್ಣೆ- ಸೀಗೇಕಾಯಿ..ರಾಜಕೀಯ ಕುರುಕ್ಷೇತ್ರಕ್ಕೆ ಅಣ್ಣಾವ್ರು ಬರಲಿಲ್ಲ ಯಾಕೆ..?

ಈ ಎಲೆಕ್ಷನ್ ಬಿಸಿ ಮಧ್ಯೆ ದೊಡ್ಮನೆಯ ಸಾವಿರಾರು ಅಭಿಮಾನಿಗಳು ಅಣ್ಣಾವ್ರ ಹುಟ್ಟುಹಬ್ಬವನ್ನ ಆಚರಸಿ ಸಂಭ್ರಮಿಸಿದ್ದಾರೆ. ಅದಕ್ಕೆ ಕಾರಣ ರಾಜಕೀಯದಲ್ಲಿ ಅಣ್ಣಾವ್ರಿಗೆ ಇದ್ದ ಆ ಗಟ್ಟಿ ನಿರ್ಧಾರ.ರಾಜ್‌ಕುಮಾರ್‌ಗೆ  ಮತ್ತು  ರಾಜಕೀಯಕ್ಕೆ  ಎಣ್ಣೆ ಸೀಗೇಕಾಯಿ ಇದ್ದಂತೆ. ಅಣ್ಣಾವ್ರಿಗೆ ರಾಜಕೀಯ ಆಗಿಬರುತ್ತಿರಲಿಲ್ಲ.

First Published Apr 25, 2023, 3:59 PM IST | Last Updated Apr 25, 2023, 3:59 PM IST

ರಾಜ್ಯ ರಾಜಕಾರಣ ದಲ್ಲಿ  ಎಲ್ಲರು ಬ್ಯುಸಿಯಾಗಿದ್ದಾರೆ. ರಾಜಕೀಯದಲ್ಲಿ ಕೆಸರೆರಚಾಟ, ಕಚ್ಚಾಟವನ್ನೆಲ್ಲಾ ನೋಡುತ್ತಿದ್ದೇವೆ.  ನೀವೆಲ್ಲಾ ನೋಡುತ್ತಿದ್ದೀರಾ. ಅಣ್ಣಾವ್ರ ಹಾಗೆ ಚಿತ್ರರಂಗದಲ್ಲಿರುವವರು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.  ಚುನಾವಣಾ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಿದ್ದಾರೆ.  ಈ ಎಲೆಕ್ಷನ್ ಬಿಸಿ ಮಧ್ಯೆ ದೊಡ್ಮನೆಯ ಸಾವಿರಾರು ಅಭಿಮಾನಿಗಳು ಅಣ್ಣಾವ್ರ ಹುಟ್ಟುಹಬ್ಬವನ್ನ ಆಚರಸಿ ಸಂಭ್ರಮಿಸಿದ್ದಾರೆ. ಅದಕ್ಕೆ ಕಾರಣ ರಾಜಕೀಯದಲ್ಲಿ ಅಣ್ಣಾವ್ರಿಗೆ ಇದ್ದ ಆ ಗಟ್ಟಿ ನಿರ್ಧಾರ. ನಟ ಸಾರ್ವಭೌಮ  ರಾಜಕೀಯಕ್ಕೆ ಬಂದಿದ್ರೆ,  ಅದೆಷ್ಟು ಭಾರಿ ಮುಖ್ಯಮಂತ್ರಿ ಆಗಿರುತ್ತಿದ್ದರು, ಅಂತಹ ದೊಡ್ಡ ಆಫರ್ ಗಳು ಅಣ್ಣಾವ್ರ ಕಾಲ ಬುಡಕ್ಕೆ ಬಂದಿತ್ತು. ಆದ್ರೆ ರಾಜ್‌ಕುಮಾರ್‌ಗೆ  ಮತ್ತು  ರಾಜಕೀಯಕ್ಕೆ  ಎಣ್ಣೆ ಸೀಗೇಕಾಯಿ ಇದ್ದಂತೆ. ಅಣ್ಣಾವ್ರಿಗೆ ರಾಜಕೀಯ ಆಗಿಬರುತ್ತಿರಲಿಲ್ಲ. ರಾಜಕೀಯ ಅಂದ್ರೆ ರಾಜ್ಕುಮಾರ್ ಅಜ್ಞಾತವಾಸಿ  ಆಗುತ್ತಿದ್ದರು. ಅವರಿಗೆ  ರಾಜಕೀಯದ ಮೇಲೆ ಕಿಂಚಿತ್ತು ಆಸಕ್ತಿ ಇರಲಿಲ್ಲ. ಆದ್ರೆ ರಾಜಕಾರಣಿಗಳಿಗೆ ಮಾತ್ರ ರಾಜ್‌ಕುಮಾರ್ ಬೇಕಿತ್ತು. ಅಣ್ಣಾವ್ರನ್ನ ಕಂಡರೆ ರಾಜಕಾರಣಿಗಳಿಗೆ ಅಪಾರ ಪ್ರೀತಿ, ಗೌರವ ಮತ್ತು ಭಯ ಇತ್ತು. ಹೀಗಾಗಿ ಯಾರೆಲ್ಲಾ ಮುಖ್ಯಮಂತ್ರಿ, ಮಂತ್ರಿ, ಎಂಎಲ್ಎಗಳಾಗುತ್ತಿದ್ದರು ಅವರು ಮೊದಲು ವರನಟನ ಮನೆಗೆ ಹೋಗಿ ಆಶೀರ್ವಾದ ಪಡೆಯುತ್ತಿದ್ದರು.