ಸಿನಿ ಪ್ರಿಯರ ನಿದ್ದೆಗೆಡಿಸಿದ 'ಮಾರ್ಟಿನ್' ಟೀಸರ್: 'ಅಜಾನುಬಾಹು'ಗಳ ಸೆಣಸಾಟಕ್ಕೆ ಫ್ಯಾನ್ಸ್ ಫಿದಾ

'ಮಾರ್ಟಿನ್‌' ಚಿತ್ರತಂಡ ಸಿನಿಮಾದ ಟೀಸರ್‌'ನ್ನು ಪೇಯ್ಡ್‌ ಪ್ರೀಮಿಯರ್‌ ಮಾಡಿ ಯಶಸ್ವಿಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ.
 

Share this Video
  • FB
  • Linkdin
  • Whatsapp

'ಮಾರ್ಟಿನ್' ಸಿನಿಮಾದ ಟೀಸರ್ ಭರ್ಜರಿಯಾಗಿ ರಿಲೀಸ್ ಆಗಿದ್ದು, ಇಲ್ಲಿಯವರೆಗೂ ಯೂಟ್ಯೂಬ್‌'ನಲ್ಲಿ 60 ಮಿಲಿಯನ್ ವ್ಯೂಸ್ ಪಡೆದುಕೊಂಡಿದೆ. ಯೂಟ್ಯೂಬ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿರುವ 'ಮಾರ್ಟಿನ್' ಟೀಸರ್‌ಗೆ 529k ಲೈಕ್ಸ್ ಲಭಿಸಿವೆ. ನಟ ಧ್ರುವ ಸರ್ಜಾರ ಮಾಸ್ ಲುಕ್'ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲಿಯೂ ಟೀಸರ್ ಅಂತ್ಯದಲ್ಲಿ ಧ್ರುವ ಸರ್ಜಾ ಇಬ್ಬರು ಮಹಾನ್ ದೈತರೊಟ್ಟಿಗೆ ಸೆಣೆಸಾಡುವ ದೃಶ್ಯದ ತುಣುಕಂತೂ ಅದ್ಭುತವಾಗಿದೆ. ಆ ಇಬ್ಬರು ನಿಜಕ್ಕೂ ಮನುಷ್ಯರೇನಾ ಎಂಬ ಅನುಮಾನ ಬರುವಷ್ಟು ದೈತ್ಯಾಕಾರ ಅವರದ್ದು. ಒಟ್ಟಾರೆಯಾಗಿ ಮಾರ್ಟಿನ್ ಭಾರೀ ಕುತೂಹಲ ಕೆರಳಿಸಿದೆ.

Related Video