ಜೀವ ಬೆದರಿಕೆಯಲ್ಲಿ ಸಿಲುಕಿದ ಬಿಟೌನ್ ಸ್ಟಾರ್ಸ್; ಮನೆಯಿಂದ ಹೊರಕಾಲಿಡಲು ಗಡ ಗಡ
ಬಿಟೌನ್ ನ ಬಿಗ್ ಸ್ಟಾರ್ ಗಳಿಗೆ ಜೀವಬೆದರಿಕೆ ಕಾಡ್ತಿದೆ. ಸಿನಿಮಾ ಶೂಟಿಂಗ್ ನಲ್ಲಿ ಬಿಡುವಾದ ತಕ್ಷಣ ಜಾಲಿಯಾಗಿ ತಿರುಗಾಡೋಣ ಅಂದ್ರೆ ಯಾರಾದ್ರು ಅಟ್ಯಾಕ್ ಮಾಡಿಬಿಟ್ರೆ ಅನ್ನೋ ಭಯ ಕಾಡ್ತಿದೆ. ಅಷ್ಟಕ್ಕೂ ಯಾರಿಗೆಲ್ಲಾ ಈ ಭಯ ಅಂದ್ರೆ ಕತ್ರಿನಾ, ವಕ್ಕಿ ಕೌಶಲ್ , ಸಲ್ಲು ಹಾಗೂ ಕಾಶ್ಮೀರ ಫೈಲ್ಸ್ ನ ವಿವೇಕ್ ರಂಜನ್.
ಬಿಟೌನ್ ನ ಬಿಗ್ ಸ್ಟಾರ್ ಗಳಿಗೆ ಜೀವಬೆದರಿಕೆ ಕಾಡ್ತಿದೆ. ಸಿನಿಮಾ ಶೂಟಿಂಗ್ ನಲ್ಲಿ ಬಿಡುವಾದ ತಕ್ಷಣ ಜಾಲಿಯಾಗಿ ತಿರುಗಾಡೋಣ ಅಂದ್ರೆ ಯಾರಾದ್ರು ಅಟ್ಯಾಕ್ ಮಾಡಿಬಿಟ್ರೆ ಅನ್ನೋ ಭಯ ಕಾಡ್ತಿದೆ. ಅಷ್ಟಕ್ಕೂ ಯಾರಿಗೆಲ್ಲಾ ಈ ಭಯ ಅಂದ್ರೆ ಕತ್ರಿನಾ, ವಕ್ಕಿ ಕೌಶಲ್ , ಸಲ್ಲು ಹಾಗೂ ಕಾಶ್ಮೀರ ಫೈಲ್ಸ್ ನ ವಿವೇಕ್ ರಂಜನ್. ಇಡೀ ಭಾರತವೇ ತಿರುಗಿ ನೋಡುವಂತಹ ಸಿನಿಮಾ ಕಾಶ್ಮೀರಿ ಫೈಲ್ಸ್ . ಕಾಶ್ಮೀರದ ಪಂಡಿತರ ಮೇಲಿನ ದೌರ್ಜನ್ಯವನ್ನ ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ಮಾಡಲಾಯ್ತು. ಸಿನಿಮಾ ಹಿಟ್ ಆಗ್ತಿದ್ದಂತೆ ನಿರ್ದೇಶಕರಿಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿತ್ತು. ಈ ವಿಚಾರವನ್ನ ಬಹಿರಂಗವಾಗಿ ನಿರ್ದೇಶಕರೇ ಹೇಳಿಕೊಂಡಿದ್ದರು. ಇನ್ನು ನಟ ಸಲ್ಮಾನ್ ಗೆ ಜೀವ ಬೆದರಿಕೆ ಇರೋದು ಹಳೆ ವಿಚಾರ. ಲಾರೆನ್ಸ್ ಬಿಶ್ನೋಯ್, ಸಲ್ಮಾನ್ ನನ್ನ ಕ್ಷಮಿಸಲ್ಲ ಹತ್ಯೆ ಮಾಡುತ್ತೇನೆ ಎಂದು ಹೇಳಿದ್ದ. ಅದರ ಜೊತೆಗೆ ಸಲ್ಮಾನ್ ಖಾನ್ ತಂದೆಗೂ ಬೆದರಿಕೆ ಪತ್ರ ಬಂದಿತ್ತು. ಇದೀಗ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಗೂ ಜೀವ ಬೆದರಿಕೆ ಬಂದಿದ್ದು ಕಿರಾತಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.