ಗಡಿಗೆ ಹೋಗಿ ಯುದ್ಧ ಮಾಡಿದ್ದಾರಾ? ಅಲ್ಲು ಅರ್ಜುನ್ ವಿರುದ್ಧ ಕಿಡಿ ಕಾರಿದ ಸಿಎಂ ರೇವಂತ್ ರೆಡ್ಡಿ!
ಅಲ್ಲು ಅರ್ಜುನ್ ಬಂಧನ ರಾಜಕೀಯ ಪ್ರೇರಿತ ಅನ್ನೋ ಆರೋಪಗಳು ಕೇಳಿಬರುತ್ತಿರವ ಬೆನ್ನಲ್ಲೇ ಸಿಎಂ ರೇವಂತ್ ರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ. ಇದೇ ವೇಳೆ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.
ಹೈದರಾಬಾದ್(ಡಿ.14) ಪುಷ್ಪಾ2 ಚಿತ್ರದ ಪ್ರಿಮಿಯರ್ ಶೋ ವೇಳೆ ಮಹಿಳಾ ಅಭಿಮಾನಿ ಸಾವು ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನ ಭಾರಿ ಕೋಲಾಹಲ ಸೃಷ್ಟಿಸಿದೆ. ಅಲ್ಲು ಅರ್ಜುನ್ ಬಂಧನ ರಾಜಕೀಯ ಪ್ರೇರಿತ ಅನ್ನೋ ಆರೋಪಗಳು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ ಅಲ್ಲು ಅರ್ಜುನ್ ತಪ್ಪಿದೆ. ಯಾವುದೇ ರಾಜಕೀಯ ಪ್ರೇರಿತ ಎಲ್ಲ. ಕಾನೂನು ರೀತಿಯಲ್ಲಿ ಕ್ರಮ ಆಗಿದೆ. ಅವರೇನು ಯುದ್ಧ ಮಾಡಿ ಬಂದಿದ್ದಾರಾ ಎಂದು ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.