ಗುಣಮಟ್ಟದ ಸಿನಿಮಾ ಮಾಡಿ, KGF 2 ಹಾಗೆ ಚೆನ್ನಾಗಿ ಓಡುತ್ತೆ; ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಲಹೆ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಯದಲ್ಲಿ ಮಾತನಾಡಿದ ಸಿ ಎಂ ಬೊಮ್ಮಾಯಿ ಉತ್ತಮ ಸಿನಿಮಾಗಳು ಬರುವಂತೆ ವಾಣಿಜ್ಯ ಮಂಡಲಿ ಮಾಡಬೇಕು ಎಂದರು. ಕೋವಿಡ್ ಬಳಿಕ ಸಿನಿಮಾರಂಗ ಕಷ್ಟದಲ್ಲಿದೆ. ಕ್ವಾಲಿಟಿ ಸಿನಿಮಾ ಮಾಡಿ, ಚೆನ್ನಾಗಿ ಓಡುತ್ತೆ ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಯದಲ್ಲಿ ಮಾತನಾಡಿದ ಸಿ ಎಂ ಬೊಮ್ಮಾಯಿ ಉತ್ತಮ ಸಿನಿಮಾಗಳು ಬರುವಂತೆ ವಾಣಿಜ್ಯ ಮಂಡಲಿ ಮಾಡಬೇಕು ಎಂದರು. ಕೋವಿಡ್ ಬಳಿಕ ಸಿನಿಮಾರಂಗ ಕಷ್ಟದಲ್ಲಿದೆ. ಕ್ವಾಲಿಟಿ ಸಿನಿಮಾ ಮಾಡಿ, ಚೆನ್ನಾಗಿ ಓಡುತ್ತೆ. ಈಗ ಕಾಲ ಬದಲಾಗಿದೆ. ಕರ್ನಾಟಕ ಸಿನಿಮಾ ಇಲ್ಲಿಗೆ ಮಾತ್ರ ಸೀಮಿತವಾಗಿಲ್ಲ. ಒಟಿಟಿ ಮೂಲಕ ಎಲ್ಲಾ ಕಡೆ ತೋರಿಸುತ್ತಿದ್ದೀರ. ಅದನ್ನು ಉಪಯೋಗ ಮಾಡಿಕೊಂಡು ವಿಶ್ವ ಮಟ್ಟದಲ್ಲಿ ಸಿನಿಮಾ ತೋರಿಸಿ. ಕೆಜಿಎಫ್-2 ವಿಶ್ವದೆಲ್ಲೆಡೆ ನೋಡಿದ್ರು. ಸರ್ಕಾರ ನಿಮ್ಮ ಜೊತೆಯಲ್ಲಿದೆ. ಇನ್ನು ಚಿತ್ರ ನಗರ ಬೇಕು ಅಂತ ಹೇಳಿದ್ರಿ. ಇದೇ ವರ್ಷ ಪ್ರಾರಂಭಮಾಡುತ್ತೇನೆ ಎಂದು ಹೇಳುತ್ತೇನೆ. ನಿಮ್ಮ ಬೆನ್ನಿಗೆ ಸರ್ಕಾರ ಸದಾ ನಿಲ್ಲುತ್ತೆ ಎಂದು ಸಿಎಂ ಬೊಮ್ಮಾಯಿ ರಾಜ್ಯ ಪ್ರಶಸ್ತಿ ಪ್ರದಾನವೇಳೆ ಮಾತನಾಡಿದರು.