Asianet Suvarna News Asianet Suvarna News

ಪ್ರೀತಿಗೆ ವಯಸ್ಸು ಅಡ್ಡಿಯಲ್ಲ ಎಂದು ಪ್ರೂವ್ ಮಾಡಿದ ಜೋಡಿಗಳಿವರು

ಸಿನಿಮಾ ಸ್ಟಾರ್ ನಟ, ನಟಿಯರು ತಮ್ಮ ಜೊತೆಯೇ ಸ್ಕ್ರೀನ್ ಶೇರ್ ಮಾಡಿರೋ ಕಲಾವಿದರನ್ನ ಹಾಗೂ ಸಿನಿಮಾ ಇಂಡಸ್ಟ್ರಿಯವರನ್ನೇ ಪ್ರೀತಿಸಿ ಮದ್ವೆ ಆಗೋದು ಕಾಮನ್...ಅಷ್ಟೇ ಅಲ್ಲದೆ ಕೆಲ ನಟರು ತಮಗಿಂದ ವಯಸ್ಸಿನಲ್ಲಿ ದೊಡ್ಡವರನ್ನ ವಿವಾಹವಾಗಿದ್ದಾರೆ...ಅಂತಹ ಸ್ಟಾರ್ ಗಳು ಯಾರು ಇಲ್ಲಿದೆ ಡಿಟೈಲ್ಸ್..

ರಾಕಿಂಗ್ ಸ್ಟಾರ್ ಯಶ್​ ಹಾಗೂ ರಾಧಿಕಾ ಪ್ರೀತಿಸಿ ಮದುವೆಯಾದವರು. ಇಬ್ಬರೂ ಒಬ್ಬರನ್ನೊಬ್ಬರು ಈಗಲೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ರಾಧಿಕಾ ಯಶ್​​ಗಿಂತ ವಯಸ್ಸಲ್ಲಿ ದೊಡ್ಡವರು. ಸದ್ಯ ಯಶ್​ ವಯಸ್ಸು 35, ರಾಧಿಕಾ ವಯಸ್ಸು 36.

ರಚಿತಾ ರಾಮ್ ಜೊತೆ ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ

ಬಾಲಿವುಡ್​ ಸ್ಟಾರ್​​ ದಂಪತಿಗಳಲ್ಲಿ ಅಭಿಷೇಕ್​ ಬಚ್ಚನ್​ ಹಾಗೂ ಐಶ್ವರ್ಯಾ ರೈ  ಜೋಡಿಯೂ ಒಂದು. ಅನೇಕ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಇಬ್ಬರೂ 2007ರಲ್ಲಿ ಮದುವೆ ಆಗಿದ್ದರು. ಅಚ್ಚರಿ ಎಂದರೆ, ಅಭಿಷೇಕ್ ಗಿಂತ ಐಶ್ವರ್ಯಾ ಮೂರು ವರ್ಷ ದೊಡ್ಡವರು.

Video Top Stories