KGF 2 Trailer: ನಿರೂಪಣೆಗೆ ಬರಲಿದ್ದಾರೆ ಬಾಲಿವುಡ್ ನಿರ್ದೇಶಕ, ಕ್ಯಾಮೆರಾಗಳಿಗೆ ಪ್ರವೇಶವಿಲ್ಲ!

ಇಂದು ಸಂಜೆ ‘ಕೆಜಿಎಫ್‌ ಚಾಪ್ಟರ್‌ 2’(KGF 2)  ಚಿತ್ರದ ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಸೇರಿದಂತೆ ಐದು ಭಾಷೆಯ ಟ್ರೇಲರ್‌ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಶಿವರಾಜ್‌ ಕುಮಾರ್‌ (Shivarajkumar) ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

Share this Video
  • FB
  • Linkdin
  • Whatsapp

ಇಂದು ಸಂಜೆ ‘ಕೆಜಿಎಫ್‌ ಚಾಪ್ಟರ್‌ 2’(KGF 2) ಚಿತ್ರದ ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಸೇರಿದಂತೆ ಐದು ಭಾಷೆಯ ಟ್ರೇಲರ್‌ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಶಿವರಾಜ್‌ ಕುಮಾರ್‌ (Shivarajkumar) ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರೂಪಕ ಕರಣ್‌ ಜೋಹರ್‌ (Karan Johar)ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಯಶ್‌, ಸಂಜಯ್‌ ದತ್‌ (Sanjay Dutt) ರವೀನಾ ಟಂಡನ್‌ (Raveena Tondon) ಪ್ರಶಾಂತ್‌ ನೀಲ್‌, ನಿರ್ಮಾಪಕ ವಿಜಯ್‌ ಕಿರಗಂದೂರು ಉಪಸ್ಥಿತರಿರುತ್ತಾರೆ.

ಕನ್ನಡದ ಚಿತ್ರಕ್ಕೆ ಬಾಲಿವುಡ್‌ನ ಗಣ್ಯ ವ್ಯಕ್ತಿ ಕರಣ್‌ ಜೋಹರ್‌ ನಿರೂಪಣೆ ಮಾಡುತ್ತಿರುವುದು ಇದೇ ಮೊದಲು. ಈ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮ ವಿಶಿಷ್ಟವಾಗಿ, ವಿಭಿನ್ನವಾಗಿ ನಡೆಯಲಿದೆ. ತಾರಾ ಹೋಟೆಲ್‌ನಲ್ಲಿ ಈ ಸಮಾರಂಭ ನಡೆಯಲಿದ್ದು, ದೇಶದ ನಾನಾ ಭಾಗದ ಪತ್ರಕರ್ತರು ಆಗಮಿಸಲಿದ್ದಾರೆ. ಯಾವುದೇ ಕ್ಯಾಮೆರಾಗಳಿಗೆ ಪ್ರವೇಶ ಇರುವುದಿಲ್ಲ. ಚಿತ್ರತಂಡವೇ ವಿಡಿಯೋ ಶೂಟ್‌ ಮಾಡಿ ಮಾಧ್ಯಮಗಳಿಗೆ ನೀಡುವ ಸಾಧ್ಯತೆ ಇದೆ.

Related Video