Asianet Suvarna News Asianet Suvarna News

ಬಾಲಿವುಡ್ ಡ್ರಗ್ಸ್ ಪಾರ್ಟಿ; ಶಾರುಖ್ ಪುತ್ರ ಆರ್ಯನ್ ಸೇರಿ ಮೂವರು ಅರೆಸ್ಟ್, ಅ.4ರ ವರೆಗೆ NCB ಕಸ್ಟಡಿ!

Oct 3, 2021, 8:10 PM IST

ದೇಶದಲ್ಲಿ ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಗೌಪ್ಯವಾಗಿರುವ ಮಾಹಿತಿಯಲ್ಲ. ಕರ್ನಾಟಕದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಡ್ರಗ್ಸ್ ಇದೀಗ ಬಾಲಿವುಡ್ ತಲ್ಲಣಗೊಳಿಸಿದೆ. ಕ್ರ್ಯೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಮಾಡಿದ NCB ಅಧಿಕಾರಿಗಳ ದಾಳಿಯಲ್ಲಿ ಬಹುದೊಡ್ಡ ಡ್ರಗ್ಸ್ ಪಾರ್ಟಿ ಬೆಳಕಿಗೆ ಬಂದಿದೆ. ಈ ದಾಳಿಯಲ್ಲಿ   ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವು ಸೆಲೆಬ್ರೆಟಿಗಳನ್ನು NCB ಅಧಿಕಾರಿಗಳು  ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಆರ್ಯನ್ ಖಾನ್ ಸೇರಿ ಮೂವರನ್ನು ಬಂಧಿಸಲಾಗಿದೆ. ಅಕ್ಟೋಬರ್ 4ರ ವರೆಗೆ NCB ಕಸ್ಟಡಿಗೆ ನೀಡಲಾಗಿದೆ. 

ಆರ್ಯನ್ ಖಾನ್ ಜೊತೆ ಪೆಡ್ಲೆರ್ ಹಾಗೂ ಆರ್ಯನ್ ಆಪ್ತ ಅರ್ಬಾಜ್ ಮರ್ಚೆಂಟ್, ಫ್ಯಾಷನ್ ಡಿಸೈನರ್ ಮುನ್‌ಮನ್ ದಮೇಚಾರನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ.  ಪಠಾಣ್ ಚಿತ್ರದ ಶೂಟಿಂಗ್ ಕ್ಯಾನ್ಸಲ್ ಮಾಡಿದ ಶಾರುಖ್ ಖಾನ್ ಪುತ್ರನ ಬಿಡುಗಡೆಗೆ ಹರಸಾಹಸ ಪಡುತ್ತಿದ್ದಾರೆ.