ಅಬ್ಬಾ, Alia Bhattಗೆ ಎಷ್ಟು ಸೊಕ್ಕು, ಅದಕ್ಕೆ ಹೇಳೋದು ಉತ್ತರ ಭಾರತೀಯ ನಟಿ ಅಂತ!

ಬಾಲಿವುಡ್‌ನ ಬಹುಬೇಡಿಕೆಯ ನಾಯಕಿಯರಲ್ಲಿ ಈಗ ಆಲಿಯಾ ಭಟ್ ಮುಂಚೂಣಿಯಲ್ಲಿದ್ದಾರೆ. ಇದೀಗ 'ಆರ್‌ಆರ್‌ಆರ್' ಬಾಲಿವುಡ್ ಪ್ರಚಾರದ ವೇಳೆ ಆಲಿಯಾ ಮಾಡಿದ ಆ ತಪ್ಪು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Share this Video
  • FB
  • Linkdin
  • Whatsapp

ಬಾಲಿವುಡ್‌ನ (Bollywood) ಬಹುಬೇಡಿಕೆಯ ನಾಯಕಿಯರಲ್ಲಿ ಈಗ ಆಲಿಯಾ ಭಟ್ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ಆಲಿಯಾ ಭಟ್ (Alia Bhatt) ‘ಗಂಗೂಬಾಯಿ ಕಾಠಿಯಾವಾಡಿ’ ಮತ್ತು 'ಆರ್‌ಆರ್‌ಆರ್' ಚಿತ್ರಗಳ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಆಲಿಯಾ ಹಾಗೂ ರಣಬೀರ್ ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ಶಿಮ್ಲಾದಲ್ಲಿ ವಿವಾಹವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಖಚಿತವಾಗಿಲ್ಲ. ಆದರೆ 'ಆರ್‌ಆರ್‌ಆರ್' (RRR) ಬಾಲಿವುಡ್ ಪ್ರಚಾರದ (Promotion) ವೇಳೆ ಆಲಿಯಾ ಮಾಡಿದ ಆ ತಪ್ಪು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್‌ ಆಗಿದೆ. ಆಲಿಯಾ ಪ್ರಚಾರದ ವೇಳೆ ಮೈಕನ್ನು ಕಾಲಲ್ಲಿ ಒದ್ದ ಘಟನೆ ನಡೆದಿದ್ದು, ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೌತ್‌ಗೂ ಬಾಲಿವುಡ್ ಇದೆ ವ್ಯತ್ಯಾಸ ಎನ್ನುತ್ತಿದ್ದು, ಅಲಿಯಾ ನಡವಳಿಕೆಗೆ ವಿರೋಧ ವ್ಯಕ್ತವಾಗುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video