Asianet Suvarna News Asianet Suvarna News

ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಇದೆಯಂತೆ ಈ ಬ್ಯಾಡ್‌ ಹ್ಯಾಬಿಟ್!

ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ಮುಗಿಸಿದ ಐಶ್ವರ್ಯಾ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಐಶ್ವರ್ಯಾ ರೈಗೆ ಸಂಬಂಧಿಸಿದ ಹಳೇ ಸುದ್ದಿಯೊಂದು ಮತ್ತೊಮ್ಮೆ ಹರಿದಾಡುತ್ತಿದೆ. ಹಿಂದೊಮ್ಮೆ ಐಶ್ವರ್ಯಾ ರೈಗೆ ಇರುವ ಒಂದು ದುರಭ್ಯಾಸದ ಬಗ್ಗೆ ನಾದಿನಿ ಶ್ವೇತಾ ಬಚ್ಚನ್ ಬಹಿರಂಗಪಡಿಸಿದ್ದರು. 

ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ಮುಗಿಸಿದ ಐಶ್ವರ್ಯಾ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಐಶ್ವರ್ಯಾ ರೈಗೆ ಸಂಬಂಧಿಸಿದ ಹಳೇ ಸುದ್ದಿಯೊಂದು ಮತ್ತೊಮ್ಮೆ ಹರಿದಾಡುತ್ತಿದೆ. ಹಿಂದೊಮ್ಮೆ ಐಶ್ವರ್ಯಾ ರೈಗೆ ಇರುವ ಒಂದು ದುರಭ್ಯಾಸದ ಬಗ್ಗೆ ನಾದಿನಿ ಶ್ವೇತಾ ಬಚ್ಚನ್ ಬಹಿರಂಗಪಡಿಸಿದ್ದರು. ಅಯ್ಯೋ ಏನಪ್ಪ ಈ ಐಶ್ವರ್ಯಾಗೆ ಯಾವ ಕೆಟ್ಟ ಅಭ್ಯಾಸ ಅಂತ ಯೋಚಿಸ್ತಾ ಇದೀರಾ. ಐಶ್ವರ್ಯಾ-ಶ್ವೇತಾ ಬಚ್ಚನ್ ನಡುವೆ ಅತ್ಯುತ್ತಮ ಬಾಂಡಿಂಗ್ ಇದೆ. ಒಬ್ಬರು ಮತ್ತೊಬ್ಬರ ಕಾಲೆಳೆದುಕೊಂಡಿರುತ್ತಾರೆ. ಮಾತ್ರವಲ್ಲದೇ ಪರಸ್ಪರ ಪ್ರೀತಿ, ಗೌರವವನ್ನೂ ಹಂಚಿಕೊಂಡಿದ್ದಾರೆ. ಅದೇ ಆತ್ಮೀಯತೆಯಿಂದ ಐಶ್‌ಗಿರುವ ಕೆಟ್ಟ ಗುಣದ ಬಗ್ಗೆ ಶ್ವೇತಾ ಹೇಳಿದ್ದಾಳೆ. ಈ ಅಭ್ಯಾಸದಿಂದ ಶ್ವೇತಾಗೆ ಆಗಾಗ ಇರಿಟೇಟ್ ಆಗುತ್ತಂತೆ. ಐಶ್ವರ್ಯಾ ಫೋನ್ ಮಾಡಿದರೆ ಬಹಳಷ್ಟು ಸಾರಿ ಪಿಕ್ ಮಾಡೋಲ್ವಂತೆ. ಅಷ್ಟೇ ಅಲ್ಲ ಕಾಲ್ ಬ್ಯಾಕ್ ಸಹ ಮಾಡೋಲ್ವಂತೆ. ಇದು ಐಶ್ವರ್ಯಾಗಿರುವ ಕೆಟ್ಟ ಅಭ್ಯಾಸ ಎಂದು ಶ್ವೇತಾ ಬಚ್ಚನ್ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment