ಮಂಡ್ಯದಲ್ಲಿ ಅಭಿ-ಅವಿವಾ ಬೀಗರೂಟ: ಭರ್ಜರಿ ಬಾಡೂಟಕ್ಕೆ 14,000 ಕೆ.ಜಿ ಮಾಂಸ ರೆಡಿ!

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅದ್ದೂರಿಯಾಗಿ ಮದುವೆ ಆಗಿದ್ದು, ಇದೀಗ ಬೀಗರೂಟಕ್ಕೆ ಭರ್ಜರಿ ತಯಾರಿಗಳು ಆರಂಭವಾಗಿವೆ. 

First Published Jun 14, 2023, 2:15 PM IST | Last Updated Jun 14, 2023, 2:33 PM IST

ಮಂಡ್ಯದಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪರ ಮದುವೆ ಬೀಗರೂಟದ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.  7 ಟನ್ ಚಿಕನ್, 7 ಟನ್ ಮಟನ್ ಸೇರಿ ಒಟ್ಟು 14,000 ಕೆ.ಜಿ ಬಾಡೂಟ ರೆಡಿಯಾಗಲಿದೆ. ಪಕ್ಕ ಅಂಬಿ ಫೇವರಿಟ್ ಐಟಂಸ್ ಇಲ್ಲಿ ಇರಲಿದೆ. ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಿದ್ಧತೆ ಆರಂಭವಾಗಿದ್ದು, ಸುಮಾರು 1 ಲಕ್ಷ ಜನರಿಗೆ ಬೀಗರೂಟ ಸಿದ್ಧಪಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. 15 ಎಕರೆ ಜಾಗದಲ್ಲಿ ಬೀಗರೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜರ್ಮನ್ ಟೆಂಟ್ ಹಾಕಲಾಗುತ್ತಿದ್ದು, 50 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ.

Video Top Stories