Asianet Suvarna News Asianet Suvarna News

ಕರ್ನಾಟಕ ಪೊಲೀಸ್ರಿಗೆ ಚಳ್ಳೇಹಣ್ಣು ತಿನ್ನಿಸಿದ ತೆಲುಗು ನಟಿ: ಸಿಕ್ಕಿಬಿದ್ದಿದ್ದೇಗೆ...

ನಾನು ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿಲ್ಲ. ಇದೆಲ್ಲಾಊಹಾಪೋಹ ಅಷ್ಟೇ. ನಾನು ಹೈದರಾಬಾದ್‌ ಫಾರ್ಮ್‌ ಹೌಸ್‌ನಲ್ಲಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿದ್ದರು.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ ಆರ್‌ ಫಾರ್ಮ್‌ನಲ್ಲಿ ಭಾನುವಾರ (ಮೇ 19) ರಾತ್ರಿ ರೇವ್‌ ಪಾರ್ಟಿ ಆಯೋಜಿಸಿದ್ದ ಮಾಹಿತಿ ಆಧರಿಸಿ ಸೋಮವಾರ (ಮೇ 20) ಬೆಳಗಿನ ಜಾವ ಸಿಸಿಬಿ ಪೊಲೀಸರು ಮತ್ತು ಮಾದಕ ವಸ್ತು ನಿಗ್ರಹ ದಳವು ದಾಳಿ ನಡೆಸಿತ್ತು. ಈ ವೇಳೆ ತೆಲುಗು ನಟ-ನಟಿಯರು, ಉದ್ಯಮಿಗಳು, ಟೆಕ್ಕಿಗಳು ಸೇರಿದಂತೆ ಅನೇಕರು ಸಿಕ್ಕಿಬಿದ್ದಿದ್ದರು. ಈ ದಾಳಿಯಲ್ಲಿ ತೆಲುಗು ನಟಿ ಹೇಮಾ ಕೂಡ ಇದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಅವರು ಅದನ್ನು ಅಲ್ಲಗಳೆದಿದ್ದರು. ಇದೀಗ ನಟಿ ಹೇಳಿದ್ದೆಲ್ಲವೂ ಸುಳ್ಳು ಎಂಬುದು ಗೊತ್ತಾಗಿದೆ. ಮಾಧ್ಯಮಗಳಲ್ಲಿ ರೇವ್‌ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಕುರಿತು ವರದಿ ಬಿತ್ತರವಾಗುತ್ತಿದ್ದಂತೆ ಕಂಗಾಲಾದ ಅವರು ಸತ್ಯ ಮರೆಮಾಚಲು, ನಾನು ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿಲ್ಲ. 

ಇದೆಲ್ಲಾಊಹಾಪೋಹ ಅಷ್ಟೇ. ನಾನು ಹೈದರಾಬಾದ್‌ ಫಾರ್ಮ್‌ ಹೌಸ್‌ನಲ್ಲಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲೂ ಕೂಡ ಏನೂ ನಡೆದೇ ಇಲ್ಲ ಎಂಬಂತೆ, ಸಹಜವಾಗಿಯೇ ಮಾತನಾಡಿದ್ದರು. ಇದನ್ನು ಕಂಡವರು, ಓಹ್ ಇದು ನಿಜ ಇರಬಹುದೇನೋ, ಹೇಮಾ ರೇವ್ ಪಾರ್ಟಿಯಲ್ಲಿ ಇರಲಿಲ್ಲ ಎಂದುಕೊಂಡಿದ್ದರು. ಆದರೆ ಅಸಲಿ ವಿಚಾರವೇ ಬೇರೆ ಆಗಿದೆ. ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ, ತಮ್ಮನ್ನು ಬಿಟ್ಟು ಬಿಡುವಂತೆ ಪೊಲೀಸರ ಬಳಿ ಅಲವತ್ತುಕೊಂಡಿದ್ದಾರೆ. ತುರ್ತಾಗಿ ಹೊರ ಹೋಗಬೇಕೆಂದು ಹೇಳಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದ ಫಾರ್ಮ್‌ಹೌಸ್‌ನಿಂದ ಹೊರ ಬಂದಿದ್ದ ಹೇಮಾ, ಈ ವೇಳೆ ಅಲ್ಲಿಯೇ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್‌ ದಯಾನಂದ್ ಅಧಿಕಾರಿ ತಿಳಿಸಿದ್ದಾರೆ.