
46ರಲ್ಲೂ 20ರ ಹುಡುಗಿಯಂತೆ ಕಾಣುವ ಬಿಪಾಶಾ ಬಸು.. ಸೌಂದರ್ಯದ ಗುಟ್ಟೇನು?
ಬಾಲಿವುಡ್ ನಟಿ ಬಿಪಾಶಾ ಬಸು 46 ವರ್ಷದವರಾಗಿದ್ದರೂ 20ರ ಹುಡುಗಿಯಂತೆ ಕಾಣುತ್ತಾರೆ. ಹಾಗಿದ್ರೆ ಅವರ ಸೌಂದರ್ಯದ ಗುಟ್ಟೇನು ಇಲ್ಲಿದೆ ಡಿಟೇಲ್
ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ.. ಬಾಲಿವುಡ್ ಬೆಡಗಿ , ಕೃಷ್ಣ ಸುಂದರಿ ಬಿಪಾಶಾ ಬಸುಗೇ ಈಗ ವಯಸ್ಸೆಷ್ಟು ಇರಬಹುದು. ಮೂವತ್ತು ಮೂವತ್ತೊಂದು ಅಂತ ಲೆಕ್ಕ ಹಾಕ್ತಾ ಇದೀರಾ.. ಅಂದ್ರೆ ನೀವು ಭರ್ತಿ 15 ವರ್ಷ ಹಿಂದೆ ಇದ್ದೀರಿ. ಈ ಮಾದಕ ಚೆಲುವೆಗೀಗ ಭರ್ತಿ 46 ವರ್ಷ. ನಂಬೋದಕ್ಕೆ ಸಾಧ್ಯ ಆಗ್ತಾ ಇಲ್ಲಾ ಅಲ್ವಾ. ಈಗಲೂ ಇಪ್ಪತ್ತರ ತರುಣಿಯಂತಿರೋ ಬಿಪಾಶಾ ನಂಗೇ ವಯಸ್ಸೇ ಆಗಲ್ಲ ಅಂತ ನಗೆ ಬೀರ್ತಾರೆ. ಬಿಪಾಶಾ ತನ್ನ ಈ ಮಾಸದ ಸೌಂದರ್ಯದ ಗುಟ್ಟೇನು ಅನ್ನೋದನ್ನ ಕೂಡ ಫ್ಯಾನ್ಸ್ ಜೊತೆ ಹಂಚಿಕೊಳ್ತಾ ಇರ್ತಾರೆ. ನಿಯಮಿತವಾಗಿ ಯೋಗ, ವ್ಯಾಯಾಮ ಮಾಡೋ ಈ ಬ್ಯೂಟಿ ವಿಶೇಷವಾಗಿ ಏರೋಬಿಕ್ಸ್ನಲ್ಲಿ ಪರಿಣಿತೆ. ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರೋ ಬಿಪಾಶಾ ಈಗಲೂ ಜಿಸ್ಮ್ ಸಿನಿಮಾದಲ್ಲಿದ್ದಂತೆಯೇ ಇದ್ದಾರೆ. ಈ ಚಿರಯುವತಿಯ ಸೌಂದರ್ಯ ಸೀಕ್ರೆಟ್ ತಿಳಿದುಕೊಳ್ಳೋದಕ್ಕೆ ನೀವು ಬೇಕಾದ್ರೆ ಈಕೆಯ ವ್ಲಾಗ್ಸ್ ನೋಡಿ. ಆದ್ರೆ ನೋಡ್ತಾ ನೋಡ್ತಾ ಬಿಪಾಶಾ ಸೌಂದರ್ಯದ ಪಾಶದೊಳಗೆ ಬಂಧಿಯಾದ್ರೆ ನಾವು ಜವಾಬ್ದಾರಿ ಅಲ್ಲ..!