ಸಂಕ್ರಾಂತಿ ಸಿನಿಮಾ ಧಮಾಕಾ: ಬಾಲಯ್ಯನ ಡಾಕು ಮಹರಾಜ್ ಟ್ರೈಲರ್ ರಿಲೀಸ್!
ಬಾಲಕೃಷ್ಣ ಅಭಿನಯದ 'ಡಾಕು ಮಹಾರಾಜ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ದೀಪಿಕಾ ಪಡುಕೋಣೆ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರವಿ ಶ್ರೀವತ್ಸ ನಿರ್ದೇಶನದ 'ಗ್ಯಾಂಗ್ಸ್ ಆಫ್ ಯುಕೆ' 2025ರ ಯುಗಾದಿಗೆ ಬಿಡುಗಡೆಯಾಗಲಿದೆ.
ಸಂಕ್ರಾಂತಿಗೆ ಎಲ್ಲಾ ಭಾಷೆಗಳಲ್ಲಿ ಬಿಗ್ ಸ್ಟಾರ್ಸ್ ಸಿನಿಮಾಗಳು ರಿಲೀಸ್ಗೆ ರೆಡಿಯಾಗ್ತಿವೆ. ಬಾಲಕೃಷ್ಣ ನಟನೆಯ ಌಕ್ಷನ್ ಮೂವಿ ಡಾಕು ಮಹಾರಾಜ್ ಕೂಡ ಜನವರಿ 12ಕ್ಕೆ ತೆರೆಗೆ ಬರಲಿದ್ದು , ರಿಲೀಸ್ ಹೊಸ್ತಿಲಲ್ಲಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಬಾಬಿ ಕೊಲ್ಲಿ ‘ಡಾಕು ಮಹಾರಾಜ್’ ಸಿನಿಮಾಗೆ ನಿರ್ದೇಶನ ಮಾಡಿದ್ದು, ಈ ಸಿನಿಮಾದಲ್ಲಿ ಬಾಲಯ್ಯ ಎದುರು ವಿಲನ್ ಆಗಿ ಬಾಲಿವುಡ್ ನಟ ಬಾಬಿ ಡಿಯೋಲ್ ಮಿಂಚಿದ್ದಾರೆ. ಡಾಕು ಮಹಾರಾಜ್ ಟ್ರೈಲರ್ನಲ್ಲಿ ಬಾಲಯ್ಯ ಅವತಾರ ಸಖತ್ ಮಾಸ್ ಆಗಿ ಮೂಡಿಬಂದಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಬರ್ತ್ಡೇ ಸಂಭ್ರಮದಲ್ಲಿ ದೀಪಿಕಾ ಪಡುಕೋಣೆ..!
ಇಂಡಿಯನ್ ಸಿನಿಇಂಡಸ್ಟ್ರಿಯಲ್ಲಿ ರಾಣಿಯಂತೆ ಮೆರೆದ ಕನ್ನಡತಿ ದೀಪಿಕಾ ಪಡುಕೋಣೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 39ನೇ ವಸಂತಕ್ಕೆ ಕಾಲಿರಿಸಿರೋ ದೀಪಿಕಾ ಸದ್ಯ ಸಿನಿರಂಗದಿಂದ ಕೊಂಚ ಬ್ರೇಕ್ ಪಡೆದಿದ್ದು ತಾಯ್ತನದ ಖುಷಿಯನ್ನ ಸವೀತಾ ಇದ್ದಾರೆ. ಕಳೆದ ವರ್ಷ ಕಲ್ಕಿ ಮತ್ತು ಸಿಂಗಮ್ ಅಗೈನ್ ಚಿತ್ರಗಳ ಅಮೋಘ ಸಕ್ಸಸ್ನ ಖುಷಿ ಅನುಭವಿಸಿರೋ ದೀಪಿಕಾ ಸದ್ಯ ಯಾವ ಸಿನಿಮಾಗೂ ಸೈನ್ ಮಾಡಿಲ್ಲ. ಈ ವರ್ಷದ ದ್ವೀತಿಯಾರ್ಧದಿಂದ ದೀಪಿಕಾ ದ್ವಿತೀಯ ಇನ್ನಿಂಗ್ಸ್ ಆರಂಭಿಸೋ ತಯಾರಿಯಲ್ಲಿದ್ದಾರೆ.
ರಿಲೀಸ್ಗೆ ಸಜ್ಜಾದ ರವಿ ಶ್ರೀವತ್ಸ ‘ಗ್ಯಾಂಗ್ಸ್ ಆಫ್ ಯುಕೆ’
ಡೆಡ್ಲಿ ಸೋಮ ಖ್ಯಾತಿಯ ರವಿ ಶ್ರೀವತ್ಸ ನಿರ್ಮಾಣ ಹಾಗೂ ನಿರ್ದೇಶನದ ಹೊಸ ಚಿತ್ರ 'ಗ್ಯಾಂಗ್ಸ್ ಆಫ್ ಯುಕೆ' 2025ರ ಯುಗಾದಿ ವೇಳೆಗೆ ತೆರೆಗೆ ಬರೋ ತಯಾರಿಯಲ್ಲಿದೆ. ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ಘಟನೆ ಇಟ್ಟುಕೊಂಡು ಈ ಕಥೆ ಹೆಣೆದಿದ್ದು ಉತ್ತರ ಕರ್ನಾಟಕ ಮಣ್ಣಿನ ರಕ್ತಸಿಕ್ತ ಕಹಾನಿ ಈ ಸಿನಿಮಾದಲ್ಲಿದೆ. ಎಂ.ಎಸ್. ರಮೇಶ್ ಜತೆ ಸೇರಿ ಚಿತ್ರಕಥೆ ಮಾಡಿಕೊಂಡಿರುವ ರವಿ ಶ್ರೀವತ್ಸ ಚಿತ್ರದ 56 ಜನ ಕಲಾವಿದರಲ್ಲಿ ಬಹುತೇಕ ಹೊಸಬರಿಗೇ ಅವಕಾಶ ನೀಡಿದ್ದಾರೆ. ಒರಟ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಮುನಿ ಹೀಗೆ ಹೊಸಬರ ಜೊತೆ ಹಳಬರೂ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೊನೇ ಹಂತದಲ್ಲಿದ್ದು, ಶೀಘ್ರವೇ ಗ್ಯಾಂಗ್ಸ್ ಆಫ್ ಯುಕೆ ಫಸ್ಟ್ ಕಾಪಿ ಹೊರಬರಲಿದೆ.