ಎಣ್ಣೆ ಪ್ರಿಯರಿಗಾಗಿ ಬಂತು ಹೊಸಾ ಹಾಡು..ಬ್ಯಾಡ್ ಮ್ಯಾನರ್ಸ್ ಸೆಕೆಂಡ್ ಸಾಂಗ್ ಔಟ್...!
ಸ್ಯಾಂಡಲ್‌ವುಡ್ ಡೈರೆಕ್ಟರ್ ದುನಿಯಾ ಸೂರಿ ನಿರ್ದೇಶನದ ಬ್ಯಾಡ್‌ಮ್ಯಾನರ್ಸ್ ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ. ಚಿತ್ರದ ಮೊದಲ ಹಾಡು ರುದ್ರಾಭಿಷೇಕ ಬಿಗ್ ಹಿಟ್ ಆಗಿತ್ತು,ಈಗ ಎರಡನೇ ಹಾಡು ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದಿದೆ.
ಸ್ಯಾಂಡಲ್‌ವುಡ್ ಡೈರೆಕ್ಟರ್ ದುನಿಯಾ ಸೂರಿ ನಿರ್ದೇಶನದ ಬ್ಯಾಡ್‌ಮ್ಯಾನರ್ಸ್ ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ. ಚಿತ್ರದ ಮೊದಲ ಹಾಡು ರುದ್ರಾಭಿಷೇಕ ಬಿಗ್ ಹಿಟ್ ಆಗಿತ್ತು,ಈಗ ಎರಡನೇ ಹಾಡು ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದಿದೆ. ಅಮರ್ ಚಿತ್ರದ ನಂತರ ಮೂರು ವರ್ಷಗಳ ನಂತರ ಅಭಿಷೇಕ್ `ಬ್ಯಾಡ್ ಮ್ಯಾನರ್ಸ್’ ರಗಡ್ ಮೂಲಕ ಬರುತ್ತಿದ್ದಾರೆ. ರಗಡ್ ಪೊಲೀಸ್ ಆಫೀಸರ್ ರುದ್ರ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಗೆ ನಾಯಕಿಯರಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್- ಪ್ರಿಯಾಂಕಾ ನಟಿಸಿದ್ದಾರೆ. ಸದ್ಯ ಸೆಕೆಂಡ್ ಸಾಂಗ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿದ್ದಾರೆ. ಇದೊಂದು ಎಣ್ಣೆ ಸಾಂಗ್ ಆಗಿದ್ದು ಸಾರಾಯಿ ಕುಡಿದ್ರೆ ಜುಮ್ಮಂತದೆ ಎಂದು ಶುರುವಾಗೊ ಹಾಡು ಪಕ್ಕಾ ರಾ ಸ್ಟೈಲಲ್ಲಿ ರೆಡಿಯಾಗಿದೆ.ನಟ ಎಮ್ಎಸ್ ಉಮೇಶ್ ಸ್ವತಃ ಸಾಹಿತ್ಯ ಬರೆದು ಕಂಪೋಸ್ ಮಾಡಿ ಹಾಡಿರುವ ಹಾಡು ಇದಾಗಿದೆ.