ಬಾಲಿವುಡ್​ಗೆ ಕೆಟ್ಟದಾಗಿ ಬೈಯ್ತಾ, ಜೋರಾಗಿ ಅಳುತ್ತಾ ವಿಡಿಯೋ ಮಾಡಿದ ಇರ್ಫಾನ್ ಖಾನ್ ಮಗ!

ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿ 5 ವರ್ಷ ಕಳೆದವು.   2022ರಲ್ಲಿ ಇರ್ಫಾನ್ ಖಾನ್ ಪುತ್ರ  ಬಾಬಿಲ್ ಖಾನ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟರು.

Share this Video
  • FB
  • Linkdin
  • Whatsapp

ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿ 5 ವರ್ಷ ಕಳೆದವು. 2022ರಲ್ಲಿ ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟರು. ಅಪ್ಪನಂತೆಯೇ ಮೋಡಿ ಮಾಡುವ ಸೂಚನೆ ನೀಡಿದ್ರು. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ‘ಕಲಾ’ ಸಿನಿಮಾದಲ್ಲಿ ಬಾಬಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರು. ಬಾಬಿಲ್ ನಟನೆಗೆ ಮೆಚ್ಚುಗೆ ಕೂಡ ಸಿಕ್ಕಿತ್ತು. ಆದರೆ ಆ ಬಳಿಕ ನಿರೀಕ್ಷಿತ ಪ್ರಮಾಣ ಬಾಬಿಲ್​ಗೆ ಅವಕಾಶಗಳು ಸಿಗಲಿಲ್ಲ. ಈಗ ಬಾಬಿಲ್ ಖಾನ್ ರ ಒಂದು ವಿಡಿಯೋ ವೈರಲ್ ಆಗಿದೆ. ಬಾಲಿವುಡ್​ಗೆ ಕೆಟ್ಟದಾಗಿ ಬೈಯ್ತಾ, ಜೋರಾಗಿ ಅಳುತ್ತಾ ನೋವು ತೋಡಿಕೊಂಡಿದ್ದಾರೆ ಬಾಬಿಲ್. ಈ ವಿಡಿಯೋದಲ್ಲಿ ಬಾಬಿಲ್ ಅನೇಕರ ಹೆಸರನ್ನು ಅವರು ಬಹಿರಂಗಪಡಿಸಿದ್ದಾರೆ. ಆದರೆ ಕೆಲವೇ ನಿಮಿಷಗಳ ಬಳಿಕ ವಿಡಿಯೋ ಡಿಲೀಟ್ ಮಾಡಿದ್ದಾರೆ. ನಂತರ ಇನ್​ಸ್ಟಾಗ್ರಾಮ್ ಖಾತೆಯನ್ನ ಕೂಡ ಡಿಲೀಟ್ ಮಾಡಲಾಗಿದೆ. ಬಾಬಿಲ್ ಖಾನ್ ಅವರಿಗೆ ಏನೋ ತೊಂದರೆ ಆಗಿದೆ ಅಂತ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. 

ವಿಜಯ್ ಸೇತುಪತಿ-ನಿತ್ಯಾ ಮೆನನ್ ಜೋಡಿಯ ಹೊಸ ಚಿತ್ರ: ವಿಜಯ್ ಸೇತುಪತಿ-ನಿತ್ಯಾ ಮೆನನ್ ಒಟ್ಟಾಗಿ ನಟಿಸಿರೋ ಹೊಸ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಸತ್ಯಜ್ಯೋತಿ ಫಿಲಂಸ್ ನಿರ್ಮಿಸ್ತಾ ಇರೋ ಸಿನಿಮಾಗೆ ತಲೈವನ್ ತಲೈವಿ ಅಂತ ಹೆಸರಿಡಲಾಗಿದೆ. ಪಾಂಡಿರಾಜ್ ಈ ಮೂವಿಗೆ ಆಕ್ಷನ್ ಕಟ್ ಹೇಳಿದ್ದು, ಟೈಟಲ್ ಟೀಸರ್ ಸಖತ್ ಮಜವಾಗಿ ಮೂಡಿಬಂದಿದೆ. ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ಇಬ್ಬರೂ ಪ್ರತಿಭಾನ್ವಿತ ಕಲಾವಿದರು. ತಮ್ಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದವರು. ಸೋ ಈ ಜೋಡಿಯ ಮೂವಿ ಬಗ್ಗೆ ಸಖತ್ ಕುತೂಹಲ ಮೂಡಿದೆ.

Related Video